ಸಿದ್ಧಕಟ್ಟೆ: ಗುಣಶ್ರೀ ವಿದ್ಯಾಲಯ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ

Coastal Bulletin
ಸಿದ್ಧಕಟ್ಟೆ: ಗುಣಶ್ರೀ ವಿದ್ಯಾಲಯ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ

ಬಂಟ್ವಾಳ: ಕಳೆದ 20 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಎಲ್ ಕೆ ಜಿ ಯಿಂದ ಸ್ನಾತಕೋತ್ತರ ಪದವಿ ತನಕ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ನಿಟ್ಟಿನಲ್ಲಿ ಆರಂಭಗೊಂಡ ಗುಣಶ್ರೀ ವಿದ್ಯಾಲಯ ಪಠ್ಯದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆ ಗಳಿಗೂ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಮನ್ ದೇವ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಹೇಳಿದ್ದಾರೆ.

ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ತಕ್ಷತೆ ವಹಿಸಿ ಅವರು ಮಾತನಾಡಿದರು.ಹಿರಿಯ ವೈದ್ಯ ಡಾ.ಕೆ.ಪ್ರಭಾಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು.

ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಕೆ.ಎಸ್.ರಾಘವೇಂದ್ರ ಬಲ್ಲಾಳ್, ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಬ್ಯಾಂಕ್ ಆಫ್ ಬರೋಡ ಶಾಖೆ ಹಿರಿಯ ಪ್ರಬಂಧಕ ಸುರೇಶ್ ಸಿಂಗ್ ಎಂಡ್ಲೂರಿ, ಉದ್ಯಮಿ ಸುಭಾಶ್ಚಂದ್ರ ಹೆಗ್ಡೆ ಶುಭ ಹಾರೈಸಿದರು.

ಇದೇ ವೇಳೆ ಕ್ರೀಡಾ ಸಾಧಕಿ ರಮ್ಯಶ್ರೀ ಜೈನ್ ಸಹಿತ ವಿವಿಧ ಸ್ಪಧರ್ಾ ವಿಜೇತರು ಮತ್ತು ಸಾಧಕ ವಿದ್ಯಾಥರ್ಿಗಳನ್ನು ಅಭಿನಂದಿಸಲಾಯಿತು.

ಸಂಗಬೆಟ್ಟು ಗ್ರಾಮ ಪಂಚಾಯತಿ

ಅಧ್ಯಕ್ಷೆ ರಾಜೀವಿ ಪೂಜಾರಿ, ಕುಕ್ಕಿಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಶೇಖರ ಶೆಟ್ಟಿ ಮಾವಿನಕಟ್ಟೆ, ಉದ್ಯಮಿಗಳಾದ ದುಗರ್ಾದಾಸ್ ಶೆಟ್ಟಿ ಕರೆಂಕಿಜೆ, ರಾಮಕೃಷ್ಣ ಚೌಟ, ಭೋಜರಾಜ್ ಶೆಟ್ಟಿ ಕೊರಗಟ್ಟೆ, ದೀಪಾ ಪ್ರಕಾಶ್ ಶೆಟ್ಟಿ, ಶಾಲಾ ಸಂಚಾಲಕ ವಿಜಯ ಕುಮಾರ್ ಚೌಟ, ಪದವಿ ಕಾಲೇಜು ಪ್ರಾಂಶುಪಾಲೆ ಲಾವಣ್ಯ, ವಿದ್ಯಾರ್ಥಿ ನಾಯಕ ತುಷಾರ್, ಶಾಲಾ ನಾಯಕ ವಿಖ್ಯಾತ್, ಸಾಂಸ್ಕೃತಿಕ ಕಾರ್ಯದಶರ್ಿ ಹರ್ಷಲ್ ಮತ್ತಿತರರು ಇದ್ದರು.

ಆಡಳಿತಾಧಿಕಾರಿ ಪೂಜಾ ಸ್ವಾಗತಿಸಿ, ಮುಖ್ಯಶಿಕ್ಷಕಿ ಜಯಶ್ರೀ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿ ಫಾತಿಮಾ ರೈಫಾ ವಂದಿಸಿದರು. ಶಿಕ್ಷಕಿಯರಾದ ದೀಪಾ, ಶ್ರೇಯಾ, ರಮ್ಯಾ ಕಾರ್ಯಕ್ರಮ ನಿರೂಪಿಸಿದರು.

Leave a Comment