ಬಂಟ್ವಾಳ :ಅಮ್ಟಾಡಿ ಕೃಷಿ ಪತ್ತಿನ ಸಹಕಾರಿ ಸಂಘವು 2025 -26ನೇ ಸಾಲಿನಲ್ಲಿ 344.70 ಕೋಟಿ ರೂ. ವ್ಯವಹಾರ ನಡೆಸಿ 1,25,30,866 ರೂ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ 10% ಡಿವಿಡೆಂಟ್ ನೀಡಲು ನಿರ್ಧರಿಸಿದೆ ಎಂದು ಅಧ್ಯಕ್ಷೆ ಮಲ್ಲಿಕಾ ವಿ ಶೆಟ್ಟಿ ತಿಳಿಸಿದ್ದಾರೆ.
ಬಂಟ್ವಾಳ ಬೈಪಾಸ್ ಅಜೆಕಲ ಭಂಡಾರಿ ಸಭಾಭವನದಲ್ಲಿ ಮಂಗಳವಾರ ನಡೆದ ಅಮ್ಟಾಡಿ ಕೃಷಿ ಪತ್ತಿನ ಸಹಕಾರಿ ಸಂಘ ನಿ ಇದರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘವು ಅಡಿಟ್ ವರ್ಗಿಕರಣದಲ್ಲಿ ' ಎ ' ಸ್ಥಾನಮಾನ ಪಡೆದಿದ್ದು, ದ. ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಸಾಧನ ಪ್ರಶಸ್ತಿಯನ್ನು ಸತತವಾಗಿ ಪಡೆಯುತಿದೆ. ಸಂಘದ ನೂತನ ಕೇಂದ್ರ ಕಚೇರಿಯ ಕಟ್ಟಡ ಉದ್ಘಾಟನೆಯು ಡಿ.06ರಂದು ಲೋಕಾರ್ಪಣೆಗೊಳಿಸಲು ಸದಸ್ಯರಿಗೆ ಅನೇಕ ಅನುಕೂಲಕರ ಯೋಜನೆಗಳನ್ನ ಅದರಲ್ಲಿ ಅಳವಡಿಸಲಾಗುವುದು ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್ ಕುಮಾರ್ ಅಜಿಲ ವಾರ್ಷಿಕ ವರದಿ ಮಂಡಿಸಿ ಸಂಘದಲ್ಲಿ 5478 ಸದಸ್ಯರಿದ್ದು,58.14 ಕೋಟಿ ಠೇವಣಿ ಸಂಗ್ರಹ 56.24 ಕೋಟಿ ರೂ ಸಾಲ ನೀಡಲಾಗಿದೆ. 3.10 ಕೋಟಿ ರೂ ಪಾಲು ಬಂಡವಾಳ, 79.05 ಕೋಟಿ ರೂ ದುಡಿಯುವ ಬಂಡವಾಳ ಇದ್ದು, ಸದರಿ ವರ್ಷದಲ್ಲಿ 99.33% ಸಾಲ ವಸೂಲಾತಿಯನ್ನು ಮಾಡಿ ಉತ್ತಮ ಸಾಧನೆಯನ್ನು ತೋರಿದೆ ಎಂದು ಮಾಹಿತಿ ನೀಡಿದರು.
ವಾರ್ಷಿಕ
ಮಹಾಸಭೆಯನ್ನು ಹಿರಿಯ ಸದಸ್ಯರಾದ ರಾಘವನ್ ನಾಯರ್, ಪದ್ಮನಾಭ ರಾವ್ ಕನಪಾಡಿ, ರಾಮಣ್ಣ ಪೂಜಾರಿ ಕಂಗಿತ್ಲು, ಪೆಲಿಕ್ಸ್ ಡಿಸೋಜ ಲೊರೆಟ್ಟೊ, ರೀಟಾ ಡಿಸೋಜ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ SSLC ಮತ್ತು PUCಯಲ್ಲಿ ಶೇಕಡ 90% ಕ್ಕಿಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಕೇಂದ್ರ ಕಚೇರಿಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಸಂಘದ ನಿರ್ದೇಶಕರಾದ ನರಸಿಂಹ ಹೊಳ್ಳ, ಅಲ್ವಿನ್ ವಿನಯ್ ಲೋಬೋ, ಕಮಲಾಕ್ಷ , ಯಶವಂತ ಅಡಪ, ವೀಣಾ ಡಿಸೋಜ , ಬಬಿತಾ ಕೋಟ್ಯಾನ್, ಎಡ್ವರ್ಡ್ ಅಲ್ವಿನ್ ಫೆರ್ನಾಂಡಿಸ್ , ಕಮಲ, ತುಕಾರಾಮ, ರೋಶನ್ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯಲ್ಲಿ ಲೆಕ್ಕಗಾರಾದ ರೇಣುಕಾ ರೈ ಮಹಾಸಭೆಯ ನೋಟಿಸನ್ನು ಸಭೆಯ ಮುಂದಿಟ್ಟರು. ಸಿಬ್ಬಂದಿಯಾದ ಅಲ್ವಿನ್ ವೇಗಸ್ ವಿದ್ಯಾರ್ಥಿ ವೇತನದ ಪಟ್ಟಿ ವಾಚಿಸಿದರು. ಸಂಸ್ಥೆಯ ಉಪಾಧ್ಯಕ್ಷ ರಾಯನ್ ಸಚಿನ್ ರೊಡ್ರಿಗಸ್ ಸ್ವಾಗತಿಸಿ, ನಿರ್ದೇಶಕ ಹರೀಶ್ ಶೆಟ್ಟಿ ಪಡು ವಂದಿಸಿದರು. ಕಡೆಗೋಳಿ ಶಾಖಾವ್ಯವಸ್ಥಾಪಕ ದಿನೇಶ್ ಅಮೀನ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.











