ಸಂತೋಷ್ ಕುಲಾಲ್ ನೆತ್ತರಕೆರೆ.

ಮನೆ ಎಂದರೆ ತಾರಸಿ ಕಟ್ಟಡ ಸುತ್ತಲೂ ಕಾಂಪೌಡ್ ಅಂಗಳಕ್ಕೆ ಇಂಟರ್ ಲಾಕ್ ಅಳವಡಿಸಿ ಜಗಮಗಿಸುವ ಈ ಕಾಲದಲ್ಲಿ ತನ್ನ ಮನೆಯ ಇಡೀ ಆವರಣವನ್ನೇ ಕೃಷಿ ಚಟುವಟಿಕೆಗಳ ಪ್ರಯೋಗ ಶಾಲೆಯನ್ನಾಗಿ ಮಾಡಿ ಮನೆಯ ಅಂಗಳವನ್ನೇ ಭತ್ತದ ಗದ್ದೆಯಾಗಿ ಪರಿವರ್ತಿಸಿ, ಇಚ್ಛಾ ಶಕ್ತಿ ಇದ್ದಲ್ಲಿ ಏನನ್ನೂ ಮಾಡಲು ಸಾಧ್ಯ ಎಂದು ಮಾದರಿ ಕೃಷಿಕರಾಗಿ ತೋರಿಸಿಕೊಟ್ಟಿದ್ದಾರೆ ರಘುನಾಥ್ ಸಪಲ್ಯ ಹೊಳ್ಳರಬೈಲು.

ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಹೊಳ್ಳರ ಬೈಲ್ ನ ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿದ ರಘುನಾಥ್ ತನ್ನ ಹತ್ತನೇ ತರಗತಿ ವ್ಯಾಸಂಗದ ನಂತರ ತನ್ನ ತಂದೆ ಪ್ರಗತಿಪರ ಕೃಷಿಕ ದಿ.ಉಗ್ಗಪ್ಪ ಸಪಲ್ಯರ ಒಡಗೂಡಿ ಕೃಷಿ ಕಾರ್ಯಕ್ಕೆ ತೊಡಗಿದವರು.

ಕೃಷಿಯನ್ನೇ ವೃತ್ತಿಯಾಗಿ ಸ್ವೀಕರಿಸಿದ ಇವರು ತನ್ನ ಮನೆಯ ಆವರಣದಲ್ಲಿ ಹೊಸ ವಿಧಾನದ ಕೃಷಿ ಕಾರ್ಯದಲ್ಲಿ

ತೊಡಗಿ, ಮನೆಯ ಅಂಗಳದಲ್ಲಿ ಸುಮಾರು 30ಸೆನ್ಸ್ ಜಮೀನಿನಲ್ಲಿ ಭತ್ತದ ಬೇಸಾಯ ಮಾಡಿ 1ಕ್ವಿಂಟಲ್ ಅಕ್ಕಿ ಯ ಇಳುವರಿಯನ್ನು ತೆಗೆಯುತ್ತಿದ್ದಾರೆ. ಗದ್ದೆಯ ಬದು(ಹುಣಿ)ವಿನ ಜಾಗವನ್ನು ಕೊಡ ಸದ್ಭಳಕೆ ಮಾಡಿ ಉದ್ದಕ್ಕೆ ಅಲಸಂಡೆ ಗಿಡವನ್ನು ನೆಟ್ಟು ಆಧುನಿಕ ಕೃಷಿ ಪದ್ದತಿಯ ಮೂಲಕ ಫಸಲು ತೆಗೆಯುತ್ತಾರೆ.ಅಷ್ಟೇ ಅಲ್ಲದೆ ಮನೆಯ ಹಿತ್ತಲಿನಲ್ಲಿ ಬಿರಿಯಾನಿ ಅಕ್ಕಿಯ ಪೈರನ್ನು ಬೆಳೆಸಿದ್ದಾರೆ.


Leave a Comment