Coastal Bulletin

ತುಂಬೆ : ಬಂಟ್ವಾಳ ತಾಲ್ಲೂಕಿನ ತುಂಬೆಯಲ್ಲಿ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ವತಿಯಿಂದ 22ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವವು ಅ.2 ರಂದು ಶ್ರೀ ರಾಮ ನಗರ ತುಂಬೆಯಲ್ಲಿ ನಡೆಯಲಿದೆ.

ಅ.2ರಂದು ಬೆಳಿಗ್ಗೆ 7 ಗಂಟೆಗೆ ವೈದಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಶಾರದಾಂಬೆಯ ಪ್ರತಿಷ್ಠೆ, ನಡೆಯಲಿದೆ.ಮಹೋತ್ಸವದ ಧ್ವಜಾರೋಹಣವನ್ನು ಜ್ಯೋತಿಷ್ಯರು ಶ್ರೀ ಅನಿಲ್ ಪಂಡಿತ್ ನೆರವೇರಿಸಲಿದ್ದಾರೆ.

ಈ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಮತ್ತು ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಸಾರ್ವಜನಿಕರಿಗೆ ರಸಪ್ರಶ್ನೆ ಮತ್ತು ಭಕ್ತಿಗೀತೆ ಸ್ಪರ್ಧೆಗಳನ್ನು, ಹೂ ಕಟ್ಟುವ ಸ್ಪರ್ಧೆ, ನಡೆಯಲಿದೆ.

ಮಧ್ಯಾಹ್ನ 12 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಷ್ಟ್ರಭಕ್ತ ನಾಗರಿಕ ವೇದಿಕೆ

ಮಂಗಳೂರಿನ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ,ಆಡಳಿತ ಟ್ರಸ್ಟಿ ಸೇವಾಂಜಲಿ ಪ್ರತಿಷ್ಠಾನ ಫರಂಗೀಪೇಟೆಯ ಸೇವಾರತ್ನ ಕೃಷ್ಣ ಕುಮಾರ್ ಪೂಂಜ , ಚೌಟ ಇಂಡೇನ್ ಗ್ಯಾಸ್ ಫರಂಗೀಪೇಟೆಯ ಜಗನ್ನಾಥ ಚೌಟ ಹಾಗೂ ಉದ್ಯಮಿ ಉಮೇಶ ಶೆಟ್ಟಿ ಬರ್ಕೆ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ನಿರಂತರ ಭಜನೆ, ಮಧ್ಯಾಹ್ನ ಮಹಾಪೂಜೆಯ ನಂತರ ಅನ್ನಸಂತರ್ಪಣೆ ಹಾಗೂ ಪರಿಸರದ ಅರಳು ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಂತರ ಸಂಜೆ 5ರಿಂದ ವಿಸರ್ಜನಾ ಪೂಜೆ, ಶೋಭಾಯಾತ್ರೆ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment