Coastal Bulletin

ಬಂಟ್ವಾಳ :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಇಲಾಖೆ ದಕ್ಷಿಣ ಕನ್ನಡ, ಯು.ಎನ್‌.ಡಿ.ಪಿ ಪ್ರಾಜೆಕ್ಟ್ ಕೋಡ್ ಉನ್ನತಿ ಯೋಜನೆ, ವತಿಯಿಂದ, ಶ್ರೀ ಶಕ್ತಿ, ಸಂಜೀವಿನಿ ಮತ್ತು ವಿವಿಧ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಸ್ವ-ಉದ್ಯೋಗ, ಉದ್ಯಮಶೀಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡು ದಿನಗಳ ಕೌಶಲ್ಯ ತರಬೇತಿಯು ಮೀನಾಕ್ಷಿ ಮಂದಿರ ಕಲ್ಲಡ್ಕದಲ್ಲಿ ಜರಗಿತು.

ಕಾರ್ಯಕ್ರಮವನ್ನು ಅಭಿಷೇಕ್ ಶೆಟ್ಟಿ ಅಧ್ಯಕ್ಷರು ಗೋಳ್ತ ಮಜಲು ಗ್ರಾಮ ಪಂಚಾಯತಿ, ಲಕ್ಷ್ಮಿ ವೀ ಪ್ರಭು ಉಪಾಧ್ಯಕ್ಷೆ, ನಳಿನಾಕ್ಷಿ ಕ್ಲಸ್ಟರ್ ಮೇಲ್ವಿಚಾರಕರು, ಶೋಭಾ ಡಬ್ಲ್ಯುಸಿಡಿ ಮೇಲ್ವಿಚಾರಕರು, ಭವಾನಿ ಎಂಬಿಕೆ,ಶಿವಕುಮಾರ ಸ್ವಾಮಿ ಜಿಲ್ಲಾ ಸಂಯೋಜಕರು ಯುಎನ್‌ಡಿಪಿ, ಉಮೇಶ್ ಇಡಿಎ, ಯುಎನ್‌ಡಿಪಿ, ಕುಮಾರಿ ದೀಕ್ಷಾ ಹಾಗೂ ಕುಮಾರಿ ಲಿಡಿಯಾ ಸಮುದಾಯ ಸಂಯೋಜಕರು ಯುಎನ್‌ಡಿಪಿ, ಲಕಿತಾ ಆರ್ ಶೆಟ್ಟಿ, ದೀಪಕ್ ಪಂ, ಸದಸ್ಯರು ಉದ್ಘಾಟಿಸಿದರು.

ಗೋಳ್ತ ಮಜಲು ಗ್ರಾಮ ಪಂಚಾಯತಿ ಅಧ್ಯಕ್ಷ ಅಭಿಷೇಕ್ ಶೆಟ್ಟಿ ಮಾತನಾಡಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣದ ಧ್ಯೇಯ ಹೊಂದಿದು ಮಹಿಳೆಯರಿಗೆ ವ್ಯಾಪಾರ ಪ್ರಾರಂಭಿಸಲು ವಿವಿಧ ಸರ್ಕಾರಿ ಯೋಜನೆಗಳನು ಜಾರಿಗೊಳಿಸಿರುವ ಕುರಿತು ಮಾತನಾಡಿದರು ಹಾಗೂ ಎರಡು

ದಿನಗಳ ಯುಎನ್‌ಡಿಪಿ ಪ್ರಾಜೆಕ್ಟ್ ಕೋಡ್ ಉನ್ನತಿ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡಿದುಕೊಳ್ಳುವ ಕುರಿತು ಮಾತನಾಡಿದರು

ಶಿವಕುಮಾರ್, ಪ್ರಾಜೆಕ್ಟ್ ಕೋಡ್ ಉನ್ನತಿ ಕಾರ್ಯಕ್ರಮದ ಉದ್ದೇಶಗಳ ಕುರಿತು ಮಾತನಾಡಿದರು ಹಾಗೂ ಮಹಿಳೆಯರು ಏಕೆ ಕಾರ್ಯಪ್ರವೃತ್ತರಾಗಬೇಕು ಮತ್ತು 2 ದಿನಗಳ ಉದ್ಯಮಶೀಲತಾ ಕಾರ್ಯಕ್ರಮದ ಕುರಿತು ವಿವರಿಸಿದರು.

ಲಕ್ಷ್ಮಿ ವೀ ಪ್ರಭು, ಲಿಂಗ ಸಮಾನತೆ ಕುರಿತು ಮಾತನಾಡಿ, ಮಹಿಳೆಯರು ಪುರುಷರಿಗಿಂತ ಕಡಿಮೆಯಿಲ್ಲ. ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಮತ್ತು ಯಶಸ್ವಿ ಉದ್ಯಮಿಗಳಾಗಿದ್ದಾರೆ ಎಂದು ಹೇಳಿದರು.

ನಳಿನಾಕ್ಷಿ ಮಾತನಾಡಿ ಮಹಿಳೆಯರು ಉದ್ಯಮಶೀಲರಾಗಬೇಕು ಮತ್ತು ವಿವಿಧ ಕಾರ್ಯಕ್ರಮಗಳ ಸದುಪಯೋಗ ಮಾಡಬೇಕು ಎಂದರು.

ಶೋಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಭವಾನಿ ಮತ್ತು ಅರುಣಾಕ್ಷಿ ಎಲ್ ಸಿ ಆರ್ ಪಿ ಹಾಗೂ ವಿವಿಧ ಸ್ವ-ಸಹಾಯ ಗುಂಪಿನ 73 ಮಹಿಳೆಯರು ಭಾಗವಹಿಸಿದ್ದರು.

Leave a Comment