Coastal Bulletin

ಬಂಟ್ವಾಳ:ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 56 ಗ್ರಾಮಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಮಂಜೂರಾದ ರೂ 102.5 ಕೋಟಿ ವೆಚ್ಚದಲ್ಲಿ ಒಟ್ಟು 253 ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಇದೇ 23ರಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಚಾಲನೆ ನೀಡಲಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಲೋಕೋಪಯೋಗಿ ಇಲಾಖೆ ವತಿಯಿಂದ ಅನುಷ್ಠಾನಗೊಂಡ ಈ ಅಭಿವೃದ್ದಿ ಕಾಮಗಾರಿಗೆ ಅಂದು ಬೆಳಿಗ್ಗೆ 7ಗಂಟೆಗೆ ಪೊಳಲಿ ಕ್ಷೇತ್ರದಲ್ಲಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಆರಂಭಗೊಳ್ಳಲಿದೆ.

ಇದೇ ವೇಳೆ ರೂ 40ಲಕ್ಷ ವೆಚ್ಚದಲ್ಲಿ ಪೊಳಲಿ ದೇವಳದ ಹಿಂಭಾಗ ಚರಂಡಿ ರಚನೆ, ರೂ 10ಲಕ್ಷ ವೆಚ್ಚದಲ್ಲಿ ಪೊಳಲಿ ರಾಮಕೃಷ್ಣ ತಪೋವನ ರಸ್ತೆ, ರೂ 4.10ಲಕ್ಷ ವೆಚ್ಚದಲ್ಲಿ ಮೂಲರಪಟ್ನ- ಸೊರ್ನಾಡ್ ರಸ್ತೆ, ರೂ 1.25ಕೋಟಿ ವೆಚ್ಚದಲ್ಲಿ ಅರಳ ಶ್ರೀ ಗರುಡಮಹಾಕಾಳಿ ದೇವಸ್ಥಾನ ರಸ್ತೆ, ರೂ 2ಕೋಟಿ ವೆಚ್ಚದಲ್ಲಿ ರಾಯಿ - ಅಣ್ಣಳಿಕೆ ರಸ್ತೆ, ರೂ 2.50 ಕೋಟಿ ವೆಚ್ಚದಲ್ಲಿ ಬೆಂಜನಪದವು-ಪಿಲಿಬೊಟ್ಟು ರಸ್ತೆ, ರೂ 7ಕೋಟಿ ವೆಚ್ಚದಲ್ಲಿ ಮಣಿಹಳ್ಳ -ಸರಪಾಡಿ-ಬಜ ರಸ್ತೆ, ರೂ 3ಕೋಟಿ ವೆಚ್ಚದಲ್ಲಿ ಸರಪಾಡಿ-ಪೆರ್ಲ-ಬೀಯಪಾದೆ ರಸ್ತೆ, ರೂ 7ಕೋಟಿ ವೆಚ್ಚದಲ್ಲಿ ಕುಂಟಾಲಪಲ್ಕೆ-ಉಳಿ ರಸ್ತೆ, ರೂ 13ಕೋಟಿ ವೆಚ್ಚದಲ್ಲಿ ಮಾರ್ನಬೈಲ್ -ಮಂಚಿ- ಸಾಲೆತ್ತೂರು

ರಸ್ತೆ, ರೂ 2.40 ಕೋಟಿ ವೆಚ್ಚದಲ್ಲಿ ಮೆಲ್ಕಾರ್ - ಮಾರ್ನಬೈಲ್ ರಸ್ತೆ, ರೂ 2ಕೋಟಿ ವೆಚ್ಚದಲ್ಲಿ ಬೊಳ್ಳಾಯಿ-ಕಂಚಿಲ-ಮಂಚಿ ರಸ್ತೆ, ರೂ 9.75ಕೋಟಿ ವೆಚ್ಚದಲ್ಲಿ ನಂದಾವರ ಕ್ಷೇತ್ರಕ್ಕೆ ನೂತನ ಸೇತುವೆ ಮತ್ತು ರಸ್ತೆ, ರೂ 2 ಕೋಟಿ ವೆಚ್ಚದಲ್ಲಿ ನರಹರಿ ಸದಾಶಿವ ದೇವಸ್ಥಾನ ರಸ್ತೆ, ರೂ 3ಕೋಟಿ ವೆಚ್ಚದಲ್ಲಿ ಕಲ್ಲಡ್ಕ- ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ ರಸ್ತೆ, ರೂ 1.50 ಕೋಟಿ ವೆಚ್ಚದಲ್ಲಿ ಕೋಡಪದವು- ಮಂಗಳಪದವು ರಸ್ತೆ, ರೂ 2ಕೋಟಿ ವೆಚ್ಚದಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ಮಾಡ ರಸ್ತೆ, ರೂ 4.95 ಕೋಟಿ ವೆಚ್ಚದಲ್ಲಿ ಸುಧೆಕಾರು - ಕಕ್ಕೆಮಜಲು- ಕಾಫಿಕಾಡು ರಸ್ತೆ, ರೂ 4.95 ಕೋಟಿ ವೆಚ್ಚದಲ್ಲಿ ನರಿಕೊಂಬು-ದಾಸಕೋಡಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಕೆಲವೆಡೆ ಕಾಮಗಾರಿ ಉದ್ಘಾಟನೆ ನಡೆಯಲಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ತಿಳಿಸಿದ್ದಾರೆ.

Leave a Comment