Coastal Bulletin

ಬಂಟ್ವಾಳ :ಸರ್ಕಾರಿ ಹಿ.ಪ್ರಾ.ಶಾಲೆ ಕಳ್ಳಿಗೆ ಹಾಗೂ ನವೋದಯ ಮಿತ್ರ ಕಲಾ ವೃಂದ(ರಿ)ನೆತ್ತರಕೆರೆ.ಇದರ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಜೂನ್ 21ರಂದು ಮಂಗಳವಾರ ದ.ಕ ಜಿ.ಪಂ ಹಿ ಪ್ರಾ.ಶಾಲೆ ನೆತ್ತರಕೆರೆಯಲ್ಲಿ ಆಚರಿಸಲಾಯಿತು.

ಪತಂಜಲಿ ಯೋಗ ಪ್ರತಿಷ್ಠಾನ ಮಂಗಳೂರು ಇದರ ಯೋಗ ಗುರುಗಳಾದ "ಮಲೆನಾಡ ಯೋಗ ರತ್ನ" ಎನ್.ವಿ.ಪ್ರಭಾ.ಚಂದ್ರಶೇಖರಯ್ಯ, ಇವರು ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಯೋಗಾಸನದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ

ಸಿ ಅಧ್ಯಕ್ಷ ದಾಮೋದರ ನೆತ್ತರಕೆರೆ, ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಸಂತೋಷ್ ಕುಮಾರ್,ಸಂಸ್ಕಾರ ಭಾರತಿ ಜಿಲ್ಲಾ ಅಧ್ಯಕ್ಷ ತಾರಾನಾಥ ಕೊಟ್ಟಾರಿ, ಶಾಲಾ ಮುಖ್ಯ.ಶಿಕ್ಷಕಿ ಸಿಲ್ವಿಯಾ ಬ್ರೇಗ್ಸ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು..ಶಿಕ್ಷಕಿ ಮರಿಯಾ ಸೆಲಿನ್ ಪ್ರಾರ್ಥಿಸಿ, ಶಿಕ್ಷಕಿ ಮೋಹಿನಿ ನಿರೂಪಿಸಿದರು.

Leave a Comment