ಬಂಟ್ವಾಳ:ರೋಟರಿ ಕ್ಲಬ್ ಟೌನ್ ಮತ್ತು ಜೆಸಿಐ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ.

Coastal Bulletin
ಬಂಟ್ವಾಳ:ರೋಟರಿ ಕ್ಲಬ್ ಟೌನ್ ಮತ್ತು ಜೆಸಿಐ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ.

ರೋಟರಿ ಕ್ಲಬ್ ಬಂಟ್ವಾಳ ಟೌನ್ ಮತ್ತು ಜೆಸಿಐ ಬಂಟ್ವಾಳ ಸಹಯೋಗದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಬಿ ಸಿ ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಜೂನ್ 21ರಂದು ಮಂಗಳವಾರ ಯೋಗಾಸನ ಪ್ರಾತ್ಯಕ್ಷಿಕೆ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಯೋಗ ಪರಿಣತರಾದ ರಶ್ಮಿಶೆಟ್ಟಿಯವರು ವಿವಿಧ ಯೋಗಾಭ್ಯಾಸವನ್ನು ನಡಸಿಕೊಟ್ಟರು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.

ಜೆಸಿಐ ಬಂಟ್ವಾಳದ ಉಪಾಧ್ಯಕ್ಷ ಜೆಸಿ ಕಿಶೋರ್ ಆಚಾರ್ಯ. ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಶಂಫತ್ ಷರೀಫ್, ನೀಯೋಜಿತ ಅಧ್ಯಕ್ಷ ಚಿತ್ತಾರಂಜನ್ ಶೆಟ್ಟಿ ವೇದಿಕೆಯಲ್ಲಿದ್ದರು.

ರೋಟರಿ ಹಾಗೂ ಜೆಸಿಐ ಸದಸ್ಯರು, ಯೋಗಭಿ ಮಾನಿಗಳು ಯೋಗ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Leave a Comment