Coastal Bulletin

ಬಂಟ್ವಾಳ:ಇಲ್ಲಿಗೆ ಸಮೀಪದ ಗುರುಪುರ ಕೈಕಂಬ ಬಡಗ ಉಳಿಪಾಡಿಯಲ್ಲಿ ನಡೆಯಲಿರುವ 'ರುದ್ರಾಕ್ಷ ವ್ಯಾಸ ಮಹಾಯಾಗ' ಇದರ ಆಮಂತ್ರಣ ಪತ್ರವನ್ನು ಕೇರಳ ಪಾಲಕ್ಕಾಡ್ ಚಿತ್ತೂರು ವ್ಯಾಸ ಪರಮಾತ್ಮ ಪೀಠಾಧಿಪತಿ ಸದ್ಗುರು ವ್ಯಾಸನಂದ ಶಿವಯೋಗಿ ಗುರೂಜಿ ಮಂಗಳವಾರ ಬಿಡುಗಡೆಗೊಳಿಸಿದರು.

ಇದೇ 30ರಂದು ಭಜನೆಯೊಂದಿಗೆ ಮಹಾಯಗಕ್ಕೆ ಚಾಲನೆ ಸಿಗಲಿದ್ದು, ಮೇ.1ರಂದು ಬೆಳಿಗ್ಗೆ 4:30 ಗಂಟೆಗೆ ಮೂಡುಬಿದ್ರಿ ಜೈನ ಮಠದ ಜಗದ್ಗುರು ಡಾ. ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿ, ಮಾಣಿಲ ಶ್ರೀಧಾಮ ಮೋಹನದಾಸ ಸ್ವಾಮೀಜಿ, ಶ್ರೀಕ್ಷೇತ್ರ ಕಟೀಲಿನ ಹರಿನಾರಾಯಣ ಅಸ್ರಣ್ಣ, ಪೊಳಲಿ ಕ್ಷೇತ್ರದ ಪ್ರಧಾನ ಅರ್ಚಕ ಮಾಧವ ಭಟ್ ಪವಿತ್ರಪಾಣಿ

ಮತ್ತಿತರರ ಉಪಸ್ಥಿತಿಯಲ್ಲಿ ಯಾಗ ನಡೆಯಲಿದೆ ಎಂದು ಸ್ವಾಮೀಜಿ ತಿಳಿಸಿದರು.

ಸಮಿತಿ ಪ್ರಧಾನ ಸಂಚಾಲಕಿ ಮಮತಾ ಎಸ್. ಕುಂದರ್, ಅಧ್ಯಕ್ಷ ಶರಣ್ ರಾಜ್, ಕಿರಣ್ ಪಕ್ಕಳ ಪೆಮರ್ಂಕಿ ಗುತ್ತು , ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಹರೀಶ್ ಮಟ್ಟಿ, ದಯಾನಂದ ಪೂಜಾರಿ, ಡಾ. ಎಲ್. ಕೆ. ಸುವರ್ಣ, ಕಮಲಾಕ್ಷ ಧನುಪೂಜೆ ಮತ್ತಿತರರು ಇದ್ದರು.

Leave a Comment