ನಡುಬೆಟ್ಟು: ಶ್ರೀ ರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ರವಿ ಎನ್ ಇವರಿಗೆ ಪಿಎಚ್‌ಡಿ ಪದವಿ.

Coastal Bulletin
ನಡುಬೆಟ್ಟು: ಶ್ರೀ ರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ರವಿ ಎನ್ ಇವರಿಗೆ ಪಿಎಚ್‌ಡಿ ಪದವಿ.

ಬಂಟ್ವಾಳ : ಬೆಳ್ತಂಗಡಿ ತಾಲೂಕಿನ ನಡುಬೆಟ್ಟು ಶ್ರೀ ರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ರವಿ ಎನ್. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಸೋಮಣ್ಣ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ 'ಪಂಜುರ್ಲಿ ದೈವದ ಪ್ರಾಧಾನ್ಯತೆ, ಪ್ರದರ್ಶನಾತ್ಮಕತೆ: ಮಾನವ ಸಂಪನ್ಮೂಲ ಅಭಿವೃದ್ಧಿ ಆಧಾರಿತ ಅಧ್ಯಯನ' ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿಯನ್ನು ನೀಡಿದೆ.

ಇವರು ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪದ ಪಾರೆಂಕಿ ಗ್ರಾಮದ ನಡುಬೆಟ್ಟುವಿನ ದಿ.ಚೆನ್ನಪ್ಪ ಮೂಲ್ಯ ಹಾಗೂ ಚಂದ್ರಾವತಿ ದಂಪತಿಯ ಪುತ್ರರಾಗಿದ್ದಾರೆ. ನಡುಬೆಟ್ಟುವಿನ ಶ್ರೀ ರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ಗಳಾಗಿದ್ದಾರೆ. 

ಇನ್ನಷ್ಟು ಅಧ್ಯಯನಾಸಕ್ತಿ ಹೊಂದಿರುವ ಇವರು ತುಳುನಾಡಿನಲ್ಲಿ

ಪ್ರಖ್ಯಾತವಾಗಿರುವ 'ಅಳಿಯ ಕಟ್ಟು ಮತ್ತು ಮಕ್ಕಳ ಕಟ್ಟುವಿನಲ್ಲಿ ಪಂಜುರ್ಲಿ ದೈವದ ಪ್ರಾಮುಖ್ಯತೆ' ಎಂಬ ವಿಷಯದ ಬಗ್ಗೆ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್ ) ಪದವಿಗಾಗಿ ಹೆಚ್ಚಿನ ವಿಮರ್ಶಾತ್ಮಕ ಸಾಂಸ್ಕೃ ತಿಕ ಅಧ್ಯಯನ ನಡೆಸಲಿದ್ದಾರೆ.

Leave a Comment