Coastal Bulletin

ಬಂಟ್ವಾಳ : ಸಮಾಜ ಕಂಡ ಶ್ರೇಷ್ಠ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವ ಸಹಕಾರಿ ಬ್ಯಾಂಕಿನ ಸ್ಥಾಪನೆಗೆ ಕಾರಣಕರ್ತ, ಹಿಂದುಳಿದ ಜಾತಿ ಮತ್ತು ವರ್ಗಗಳ ನಾಯಕರಾದ ಡಾ.ಅಮ್ಮೆಂಬಳ ಬಾಳಪ್ಪರ ನೂರನೇ ಜನ್ಮದಿನದ ಪ್ರಯುಕ್ತ "ಜನ್ಮ ಶತಮಾನೋತ್ಸವ "ಕಾರ್ಯಕ್ರಮವು ಫೆ 23ರಂದು ಬುಧವಾರ ಸಂಜೆ 4.30ಯಿಂದ ಕುಲಾಲ ಸಮುದಾಯ ಭವನ ಪೊಸಳ್ಳಿ ಬಿಸಿರೋಡ್ ನಲ್ಲಿ ನಡೆಯಲಿದೆ.

ಡಾ. ಅಮ್ಮೆಂಬಳ ಬಾಳಪ್ಪ ಜನ್ಮ ಶತಮಾನೋತ್ಸವದ ಸುಸಂದರ್ಭದಲ್ಲಿ ಸಂಜೆ 4 ಗಂಟೆಗೆ ರಾಜ್ಯ ಹೆದ್ದಾರಿ ರಸ್ತೆ ಮಾರ್ನಬೈಲ್- ಮಂಚಿ ರಸ್ತೆಗೆ "ಡಾ. ಅಮ್ಮೆಂಬಳ ಬಾಳಪ್ಪ ರಸ್ತೆ "ಎಂಬ ನಮಾಂಕಿತ ಮಾರ್ಗಸೂಚಿಯು ಅನಾವರಣಗೊಳ್ಳಲಿದೆ.

ಸಭಾಕಾರ್ಯಕ್ರಮ ಹಿರಿಯ ಸಾಹಿತಿಗಳು,ಪತ್ರಿಕಾ ಬರಹಗಾರರೂ ಆದ ಅಮ್ಮೆಂಬಳ ಆನಂದ ಅಂಕೋಲ

ಮತ್ತು ಬಿ ಎಸ್ ಎಫ್ ನಿವೃತ್ತ ಕಮಾಂಡೆಂಟ್,ಡಿ ಚಂದಪ್ಪ ಮೂಲ್ಯ,ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ನಾರಾಯಣ ಸಿ ಪೆರ್ನೆ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಎಲ್ಲರೂ ಪ್ರೀತಿಪೂರ್ವಕ ವಾಗಿ ಭಾಗವಹಿಸಬೇಕೆಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಅಗ್ರಬೈಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment