Coastal Bulletin

ಬಂಟ್ವಾಳ :ಇಲ್ಲಿನ ತುಂಬೆ ಗ್ರಾಮದ ಜ್ಯೋತಿಗುಡ್ಡೆಯಲ್ಲಿ ಸುಮಾರು 40 ವರ್ಷಗಳ ಹಿಂದೆ ನಿರ್ಮಾಣಗೊಂಡ, ಪೌರಾಣಿಕ ಹಿನ್ನಲೆಯುಳ್ಳ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಉತ್ಸವವು ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ಮಾರ್ಗದರ್ಶನದಲ್ಲಿ ವೈದಿಕ ವಿಧಿ ವಿಧಾನಗಳೊಂದಿಗೆ ಫೆ 27ರಿಂದ ಮಾ 2ರ ವರೆಗೆ ನಡೆಯಲಿದೆ.

ಫೆ 27ರಂದು ಆದಿತ್ಯವಾರ ಬೆಳಿಗ್ಗೆ 8ರಿಂದ ತೋರಣ ಮಹೂರ್ತ, ನವಕಲಶ. ಗಣಹೋಮ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರುಗಲಿದೆ. ಸಂಜೆ 6ರಿಂದ 8ರ ವರೆಗೆ ಹರಿನಾಮ ಸಂಕೀರ್ತನೆ ನಡೆದು ಮಹಾಪೂಜೆ ನೆರವೇರಲಿದೆ. ಬಳಿಕ ಕಟೀಲು ಮೇಳದವರಿಂದ "ಶ್ರೀ ದೇವಿ ಮಹಾತ್ಮೆ"ಎಂಬ ಯಕ್ಷಗಾನ ಬಯಲಾಟ ಜರುಗಲಿದೆ.

ಫೆ 28ರಂದು ಸೋಮವಾರ ಮಧ್ಯಾಹ್ನ 12.30ಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8.30ಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ವಿವಿಧ ಗಣ್ಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ.9.30ಯಿಂದ ವಿಠ್ಠಲ

ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ "ಗೀತ ಸಾಹಿತ್ಯ ಸಂಭ್ರಮ"ಕಾರ್ಯಕ್ರಮ ನಡೆಯಲಿದೆ.

ಮಾ.1ರಂದು ಮಂಗಳವಾರ ಮಧ್ಯಾಹ್ನ 12.30ಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 7ರಿಂದ ನೃತ್ಯಂಜಲಿ ಭರತನಾಟ್ಯ ಕೇಂದ್ರ ಜ್ಯೋತಿಗುಡ್ಡೆ ಇದರ ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ 8.30ಯಿಂದ ತರಿಕಿಟ ಕಲಾ ಕಮ್ಮಟ (ರಿ )ಜ್ಯೋತಿಗುಡ್ಡೆ ಮತ್ತು ಸ್ಥಳೀಯ ಕಲಾವಿದರಿಂದ "ಭಕ್ತ ಸಿರಿಯಾಳ"ಎಂಬ ತುಳು ಯಕ್ಷಗಾನ ಬಯಲಾಟ ಜರುಗಲಿದೆ. ಫೆ 2 ರಂದು ಬುಧವಾರ ರಾತ್ರಿ 8 ರಿಂದ ಅಣ್ಣಪ್ಪ ಸ್ವಾಮಿ ನೇಮೋತ್ಸವ ನಡೆಯಲಿದೆ.


ನೂತನ ಅನ್ನಛತ್ರ ಹಾಗೂ ಸಮುದಾಯ ಭವನದ ನಿರ್ಮಾಣ :

Leave a Comment