ಬಂಟ್ವಾಳ :ತಾಲೂಕಿನ ಬಿ.ಸಿ.ರೋಡಿನ "ಚಿಣ್ಣರ ಲೋಕ" ದ ಕರಾವಳಿ ಕಲೋತ್ಸವದಲ್ಲಿ ಜಲಜೀವನ್ ಮಿಷನ್ ನ ವಸ್ತು ಪ್ರದರ್ಶನಕ್ಕೆಜ.20ರಂದು ಚಾಲನೆ ನೀಡಲಾಯಿತು.
ಈ ವಸ್ತು ಪ್ರದರ್ಶನವನ್ನು ಮಾಣಿಲ ಶ್ರೀಧಾಮದ ಶ್ರೀ ಪರಮಹಂಸ ಸ್ವಾಮಿ ಜಿ,, ಮೋಡಂಕಾಪು ಧರ್ಮ ಗುರುಗಳಾದ ವಂದನೀಯ ಮೇಲ್ವಿನ್. ಯಕ್ಷಗಾನ ಭಾಗವತರಾದ ಶ್ರೀ ಸತೀಶ್ ಶೆಟ್ಟಿ ಪಟ್ಲ,, ಕಾರ್ಯಕ್ರಮದ ಆಯೋಜಕರಾದ ಮೋಹನ್ ದಾಸ ಕೋಟ್ಟಾರಿ, ಪ್ರದರ್ಶನಕ್ಕೆ ಚಾಲನೆ ನೀಡಿ ವೀಕ್ಷಿಸಿದರು
ವಸ್ತು ಪ್ರದರ್ಶನದಲ್ಲಿ ನೀರಿನ ಗುಣಮಟ್ಟ ಪರೀಕ್ಷೆ ಮಾಡುವ ಬಗ್ಗೆ,
ಮಳೆ ನೀರು ಕೊಯ್ಲು, ತ್ಯಾಜ್ಯ ನೀರು ನಿರ್ವಹಣೆ ಮತ್ತು ಇನ್ನೀತರ ವಿಷಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಯಿತು.
ಸ್ಥಳೀಯ ಅಧಿಕಾರಿ ವರ್ಗದವರು,ನಾಯಕರುಗಳು ಭೇಟಿ ನೀಡಿ ಜಲಜೀವನ್ ಮಿಷನ್ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕಿನ ಜಲಜೀವನ್ ಮಿಷನ್ ಸಮುದಾಯ ಸಂಘಟಕರಾದ ಶ್ರೀಮತಿ.ವಿಲ್ಮಾ ಪ್ರಿಯಾ ಮತ್ತು ಶ್ರೀಮತಿ. ಗುಣವತಿ ಹಾಗೂ ಚಂದ್ರಶೇಖರ ವಸ್ತು ಪ್ರದರ್ಶನವನ್ನು ಆಯೋಜಿಸಿ ಸಂಯೋಜಿಸಿದ್ದರು.














