Coastal Bulletin

ಬಂಟ್ವಾಳ :ಇಲ್ಲಿನ ಸಂಸ್ಕಾರ ಭಾರತಿ ವತಿಯಿಂದ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ 'ಗುರುವಂದನಾ ಕಾರ್ಯಕ್ರಮ' ಇದೇ 24 ರಂದು ಮಧ್ಯಾಹ್ನ 2 ಗಂಟೆಗೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.

ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ಸಂಸ್ಕಾರ ಭಾರತಿ ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಬಂಟ್ವಾಳ ಸಂಚಾಲಕ ಸರಪಾಡಿ ಆಶೋಕ ಶೆಟ್ಟಿ ಮತ್ತಿತರ ಗಣ್ಯರು

ಭಾಗವಹಿಸುವರು. ಇದೇ ವೇಳೆ ಸಾಮಾಜಿಕ ಕಾರ್ಯಕರ್ತ ಶೀನ ಶೆಟ್ಟಿ ಬಾರಿಂಜೆ, ನಾಟಿ ವೈದ್ಯ ಶೀನ ಪೂಜಾರಿ ಬಡಗಬೆಳ್ಳೂರು, ರಂಗಭೂಮಿ ಹಿರಿಯ ಕಲಾವಿದ ಪ್ರೇಮಾನಂದ ಭಟ್ ವಿಟ್ಲ, ಗ್ರಾಮೀಣ ಪ್ರಸೂತಿ ತಜ್ಞೆ ಗೌರಿ ಸಾಲೆತ್ತೂರು ಇವರನ್ನು ಅಭಿನಂದಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. 

Leave a Comment