ಬಂಟ್ವಾಳ :ಪುದು ಗ್ರಾಮದ ಕಡೆಗೋಳಿಯಲ್ಲಿ,ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಇವರ 3 ಲಕ್ಷದ ಅನುದಾನದಲ್ಲಿ ನಿರ್ಮಾಣ ಗೊಂಡ ನೂತನ ರಾಜಶ್ರೀ ರಿಕ್ಷಾ ತಂಗುದಾಣವನ್ನು ಪ್ರತಾಪ್ ಸಿಂಹ ನಾಯಕ್ ಶುಕ್ರವಾರ ಸಂಜೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬಿ ಜೆ ಪಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್, ಸಂತೋಷ್ ಕುಮಾರ್ ರೈ ಬೋಳ್ಯಾರ್, ರವೀಂದ್ರ ಕಂಬಳಿ,ಗಣೇಶ್ ಸುವರ್ಣ ತುಂಬೆ, ಮನೋಜ್
ಆಚಾರ್ಯ ನಾಣ್ಯ,ಭರತ್ ಕುಮ್ಡೇಲ್, ಭಾಸ್ಕರ್ ಚೌಟ ಕುಮ್ಡೇಲ್, ಪೂವಪ್ಪ ಮೂಲ್ಯ ನಾಣ್ಯ,ವಿಠಲ ಸಾಲ್ಯಾನ್ ಕುಮ್ಡೇಲ್,ಆಶಾ ನಯನ, ಜಯಂತಿ ದೇವದಾಸ್, ಜಯಶ್ರೀ ಕರ್ಕೇರಾ, ಯಶವಂತ ಅಮೀನ್ ಉಳ್ಳಾಲ ಇವರು ಉಪಸ್ಥಿತರಿದ್ದರು.














