ಮಂಚಿ: ಅಕ್ರಮ ಮದ್ಯ ದಾಸ್ತಾನು:ಅಬಕಾರಿ ಇಲಾಖೆಯಿಂದ ದಾಳಿ.

Coastal Bulletin
ಮಂಚಿ: ಅಕ್ರಮ ಮದ್ಯ ದಾಸ್ತಾನು:ಅಬಕಾರಿ ಇಲಾಖೆಯಿಂದ ದಾಳಿ.

ಬಂಟ್ವಾಳ: ಬಂಟ್ವಾಳ ಅಬಕಾರಿ ಇಲಾಖೆಯ ತಂಡ ಉಪ ಅಧೀಕ್ಷಕ ಸಂತೋಷ ಮೋಡಗಿ ನೇತೃತ್ವದಲ್ಲಿ ಮದ್ಯ ದಾಸ್ತಾನಿನ ಕುರಿತ ಖಚಿತ ಮಾಹಿತಿಯ ಮೇರೆಗೆ ಮಂಚಿ ಗ್ರಾಮದ ಮನೆಯೊಂದಕ್ಕೆ ದಾಳಿ ನಡೆಸಿದ ಅಕ್ರಮವಾಗಿ ದಾಸ್ತಾನಿಟ್ಟಿದ್ದ ಗೋವಾ ರಾಜ್ಯದ ಮದ್ಯ ಹಾಗೂ ಹೋಮ್ ಮೇಡ್ ವೈನ್ ಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದ್ದು ಆರೋಪಿ ಅರುಣ್ ನೊರೊನ್ಹಾ ತಲೆಮರೆಸಿಕೊಂಡಿದ್ದಾನೆ.

ಈತನ ಮನೆಯಲ್ಲಿ ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ-750ml ನ 1 ಬಕಾರ್ಡಿ ಲೇಮನ್ ರಮ್ ಬಾಟಲ್, ಅಮೃತ್ ಅಮಲ್ಗಮ್ 750 ಎಂಎಲ್ ಅಳತೆಯ ಬಾಟಲಿಯಲ್ಲಿ ಸೈನಿಕರಿಗೆ ಮಾತ್ರ ನಮೂದಿಸಿರುವ 500ml ವಿಸ್ಕಿ, ವೈಟ್ ಡಿಮಿಸಿಖ್ ಗ್ಯಾಕೋಬಾಜಿ ಎಂದು ನಂಬಿಸಿರುವ 750ml ನ 1 ವಿದೇಶಿ ವೈನ್ ಬಾಟಲ್, ಖಾಲಿ ಎಂ ಸಿ ಮ್ಯಾಕ್ಡೊವೆಲ್ಸ್ ವಿಸ್ಕಿ ಬಾಟಲಿಗಳಲ್ಲಿ ತುಂಬಿಸಿದ ವಿವಿಧ

ಫ್ಲೇವರ್ ಗಳ ಹೋಮ್ ಮೇಡ್ ವೈನ್ ಸೇರಿ ಒಟ್ಟು 13 ಬಾಟಲ್‌ ಗಳಲ್ಲಿ 4.250 ಲೀಟರ್ ನಷ್ಟು, ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ ವಿವಿಧ ಬ್ರಾಂಡ್ ನ 8 ಖಾಲಿ ಬಾಟಲಿಗಳು ಹೀಗೆ ಒಟ್ಟು 6.25 ಲೀಟರ್ ನಷ್ಟು ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಿಸಿಕೊಂಡಿರುವ ಅಬಕಾರಿ ಅಧಿಕಾರಿಗಳು ಆತನ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

Leave a Comment