Coastal Bulletin

ಬಂಟ್ವಾಳ :ಕೆನರಾ ಇಂಜಿನೀಯರಿಂಗ್ ಕಾಲೇಜು ಬೆಂಜನ ಪದವು , ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ, ಲಯನ್ಸ್ ಕ್ಲಬ್ ಮಾಣಿ ಹಾಗೂ ಗ್ರಾಮ ಪಂಚಾಯತ್ ನೆಟ್ಲಮುಡ್ನೂರು ಇದರ ಜಂಟಿ ಆಶ್ರಯದಲ್ಲಿ ಸೆ.22ನೇ ಗುರುವಾರದಂದು ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.00 ವರೆಗೆ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಣ್ಣಿನ ಫಲವತ್ತತೆ, ಜೈವಿಕ ಗೊಬ್ಬರದ ಬಳಕೆ ಹಾಗೂ ಕೃಷಿ ಯಂತ್ರೋಪಕರಣಗಳ ಕುರಿತು ಮಾಹಿತಿ ಮತ್ತು ಕಾರ್ಯಗಾರ ನಡೆಯಲಿರುವುದು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ , ವಾರಣಾಸಿ ಅಭಿವೃದ್ಧಿ ಹಾಗೂ ಸಂಶೋಧನಾ ಘಟಕ ಅಡ್ಯನಡ್ಕ ಇದರ ನಿರ್ದೇಶಕರಾದ ಶ್ರೀ ಪಾರ್ಥ ವಾರಣಾಸಿ ಕಾರ್ಯಗಾರವನ್ನು ನಡೆಸಿಕೊಡಲಿದ್ದಾರೆ.

 ಸೆ.23 ರಂದು ವಾರಣಾಸಿ ಅಭಿವೃದ್ಧಿ ಘಟಕಕ್ಕೆ ಭೇಟಿ ನೀಡಿ ಅಲ್ಲಿನ

ಚಟುವಟಿಕೆಗಳ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.ಆದುದರಿಂದ ನೆಟ್ಲಮುಡ್ನೂರು, ಅನಂತಾಡಿ, ಮಾಣಿ ಮತ್ತು ಪೆರಾಜೆ ಗ್ರಾಮದ ಕೃಷಿಕರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment