ಬಂಟ್ವಾಳ : ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಸಂಸ್ಥೆಯು ಕಳೆದ ಸಾಲಿನಲ್ಲಿ ಗಮನಾರ್ಹ ಪ್ರಗತಿಯನ್ನು ಸಾದಿಸಿದೆ . ಕಳೆದ ವರ್ಷಾಂತ್ಯ ಕ್ಕೆ 15.25 ಕೋಟಿ ಇದ್ದ ಠೇವಣಿ ಈ ವರ್ಷಾಂತ್ಯಕ್ಕೆ ರೂ 17.06. ಕೋಟಿ ಗೆ ಏರಿಕೆ ಯಾಗಿದೆ ಸಾಲ ಹೊರಬಾಕಿ ರೂ 9.63 ಕೋಟಿ ಯಿಂದ 9.93 ಕೋಟಿ ಗಳಿವೆ ಹೂಡಿಕೆಗಳು ರೂ 6.19 ಕೋಟಿ ಯಿಂದ 6.95 ಕೋಟಿ ಗೆ ಏರಿಕೆ ಯಾಗಿದ್ದು , ದುಡಿಯುವ ಬಂಡವಾಳ ರೂ 16.56 ಕೋಟಿ ಯಿಂದ 18.52 ಕೋಟಿ ಗೆ ಏರಿಕೆ ಸಂಘದ ಒಟ್ಟು ವ್ಯವಹಾರ 75.67 ಕೋಟಿಗೆ ಹಾಗು ನಿವ್ವಳ ಲಾಭ 16.30 ಲಕ್ಷ ಆಗಿದ್ದು ಆಡಿಟ್ ವರ್ಗಿಕರಣದಲ್ಲಿ ಬಿ ತರಗತಿಯ ಸ್ಥಾನಮಾನ ಪಡೆದಿರುತ್ತವೆ.10%ಡಿವಿಡೆಂಟ್ ನೀಡಲಾಗುವುದು ಎಂದು ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ದ ಅಧ್ಯಕ್ಶರಾದ ಸುಬ್ರಮಣ್ಯ ರಾವ್ ರವರು ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಮಾಹಿತಿ ನೀಡಿದರು.
ಮುಖ್ಯ ಕಾರ್ಯನಿರ್ವಹಣಾದಿಕಾರಿ ಕಮಲಾ ಬಿ ಯವರು ವಾರ್ಷಿಕ ಲೆಕ್ಕ ಪತ್ರ ವಾಚಿಸಿದರು ಉಪಾಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪುಂಚಮೆ , ನಿರ್ದೇಶಕರುಗಳಾದ ಪ್ರತಾಪ್ ಆಳ್ವ ಸುಜೀರು , ಜೀವನ್ ಪ್ರಕಾಶ್ ಡಿಸೋಜಾ ಬಡ್ಡೂರು , ಗಂಗಾದರ ಪೂಜಾರಿ ಅಬ್ಬೆಟ್ಟು , ಸಂತೋಷ್ ಕುಮಾರ್
ನೆತ್ತರಕೆರೆ , ವೆಂಕಪ್ಪ ಕುಂಭ್ಡೇಲು , ಶೈಲಜಾ ಪಿ ಶೆಟ್ಟಿ ಕೊಟ್ಟಿಂಜ , ವಸಂತಿ ಕೆ ಕಿದೆ ಬೆಟ್ಟು , ಹರೀಶ್ ಕುಮಾರ್ ಕೊಡ್ಮಣ್ , ಪುರುಷೋತ್ತಮ ಅಬ್ಬೆಟ್ಟು ರಮೇಶ್ ಬಂಗೇರ ಎಂಪೆದಗುರಿ , ಜಯಾನಂದ ನಾಯ್ಕ ಕುಂಭ್ಡೇಲು ಉಪಸ್ಥಿತರಿದ್ದರು.ಪದ್ಮನಾಭ ಶೆಟ್ಟಿ ಪುಂಚಮೆ ವಂದಿಸಿದರು.














