ಬಿಕರ್ನಕಟ್ಟೆ: ಶ್ರೀ ಹರಿಹರ ಪಾಂಡುರಂಗ ವಿಠ್ಠಲ ಭಜನಾ ಮಂದಿರದ ನೂತನ ಅಧ್ಯಕ್ಷರಾಗಿ ಅಡ್ಯಾರ್ ಗುತ್ತು ಮನೋಹರ್ ರೈ ಆಯ್ಕೆ.

Coastal Bulletin
ಬಿಕರ್ನಕಟ್ಟೆ: ಶ್ರೀ ಹರಿಹರ ಪಾಂಡುರಂಗ ವಿಠ್ಠಲ ಭಜನಾ ಮಂದಿರದ ನೂತನ ಅಧ್ಯಕ್ಷರಾಗಿ ಅಡ್ಯಾರ್ ಗುತ್ತು ಮನೋಹರ್ ರೈ ಆಯ್ಕೆ.

ಮಂಗಳೂರು :ಶ್ರೀ ಹರಿಹರ ಪಾಂಡುರಂಗ ವಿಠ್ಠಲ ಭಜನಾ ಮಂದಿರ ಟ್ರಸ್ಟ್ (ರಿ ) ಬಿಕರ್ನಕಟ್ಟೆ ಇದರ 101ನೇ. ವರ್ಷದ ಭಕ್ತರ ಸಭೆಯು ಪ್ರೊ. ವಿ ಜಯರಾಮ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಂದಿರದ ನೂತನ ಪದಾಧಿಕಾರಿಗಳ ಸಮಿತಿ ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ಅಡ್ಯಾರ್ ಗುತ್ತು ಮನೋಹರ್ ರೈ ಸರ್ವನುಮತದಿಂದ ಆಯ್ಕೆಯಾದರು. ಗೌರವಧ್ಯಕ್ಷ ಭರತೇಶ್ ಕುಮಾರ್, ಉಪಾಧ್ಯಕ್ಷ ಡಾ ಚಂದ್ರಶೇಖರ್, ಶರತ್ ಬಿಕರ್ನಕಟ್ಟೆ, ಉಮಾವತಿ . ಕಾರ್ಯದರ್ಶಿ ಜಗದೀಶ್ ಆಚಾರ್ಯ,ಜೊತೆ ಕಾರ್ಯದರ್ಶಿ ಶೋಭಾ ಶೇಖರ್ ಕೊಟ್ಟಾರಿ, ಅವಿನಾಶ್ , ಲೋಲಾಕ್ಷ ಆಚಾರ್ಯ,

ಕೋಶಾಧಿಕಾರಿ ಸುಚಿತ್ರ ಪ್ರಶಾಂತ್, ಭಜನಾ ಸಂಚಾಲಕ ಶ್ರೇಯಸ್ (ವಕೀಲರು ) ಹಾಗೂ ಇತರ ಪದಾಧಿಕಾರಿಗಳ ಆಯ್ಕಯಾದರು.

ಬಳಿಕ ಮಂದಿರದ ಸದಸ್ಯರಿಂದ ಭಕ್ತಿ ರಸಮಂಜರಿ ನಡೆಯಿತು..ಡಾ. ಚಂದ್ರಶೇಖರ ಸ್ವಾಗತಿಸಿ, ರಾಜೇಶ್ ಶೆಟ್ಟಿ ಶಕ್ತಿನಗರ ಧನ್ಯವಾದವಿತ್ತು, ಶ್ರೇಯಸ್ ಕಾರ್ಯಕ್ರಮ ನಿರೂಪಿಸಿದರು.

Leave a Comment