ತುಂಬೆ :ಡಿ. 21ರಂದು ಸರಕಾರಿ ಶಾಲಾ ವಾರ್ಷಿಕೋತ್ಸವ, ಗ್ರಾಮ ಗೌರವ, ಪ್ರತಿಭಾ ಪುರಸ್ಕಾರ.

Coastal Bulletin
ತುಂಬೆ :ಡಿ. 21ರಂದು ಸರಕಾರಿ ಶಾಲಾ ವಾರ್ಷಿಕೋತ್ಸವ, ಗ್ರಾಮ ಗೌರವ, ಪ್ರತಿಭಾ ಪುರಸ್ಕಾರ.

ಬಂಟ್ವಾಳ :ದ. ಕ. ಜಿ. ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ,ತುಂಬೆ, ಬಂಟ್ವಾಳ ತಾಲೂಕು ಇದರ ಶಾಲಾ ವಾರ್ಷಿಕೋತ್ಸವ,ಗ್ರಾಮ ಗೌರವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಡಿ.21ನೇ ಶನಿವಾರ ಅಪರಾಹ್ನ ಗಂಟೆ 2-00ರಿಂದ ಸಂಜೆ 7-00ರ ವರೆಗೆ ಶಾಲೆಯ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ನಡೆಯಲಿದೆ.

ಅಪರಾಹ್ನ ಗಂಟೆ 2-00ರಿಂದ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು, 4-00ರಿಂದ ಸಭಾ ಕಾರ್ಯಕ್ರಮ, ಗ್ರಾಮ ಗೌರವ, ಬಹುಮಾನ ವಿತರಣೆ ಬಳಿಕ ಹಳೇ

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯತೆಗಳು,ಸಂಜೆ ಗಂಟೆ 5ರಿಂದ ವೈಷ್ಣವಿ ಕಲಾವಿದೆರ್, ಕೊಯಿಲಿ ಇವರಿಂದ ಕುಸಲ್ದ ಗೌಜಿ ಕಾರ್ಯಕ್ರಮ ನಡೆಯಲಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

Leave a Comment