ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಬ್ರಹ್ಮರಕೂಟ್ಲು, ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದ ಅಂಗ್ಲ ಮಾಧ್ಯಮ ಸರಕಾರಿ ಶಾಲೆ, ಇದರ ಶಾಲಾ ವಾರ್ಷಿಕ ಉತ್ಸವವು 21ನೇ ಶನಿವಾರ ಪೂರ್ವಾಹ್ನ ನಡೆಯಲಿದೆ.
ಬೆಳಿಗ್ಗೆ 9:30ಕ್ಕೆ ಶಾಲಾ ಧ್ವಜಾರೋಹಣ ನಡೆದು ವಿದ್ಯಾರ್ಥಿಗಳ ಏರೋಬಿಕ್ ವ್ಯಾಯಾಮ ಪ್ರದರ್ಶನ ನಡೆಯಲಿದೆ, ಬಳಿಕ ವಾರ್ಷಿಕೋತ್ಸವ ಸಮಾರಂಭವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ ಯು. ಉದ್ಘಾಟಿಸಳಿದ್ದು, ಮಾಜಿ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಮನೋಜ್ ಕನಪಾಡಿ, ಜಿಲ್ಲಾ ರಾಜ್ಯೋತ್ಸವ
ಪ್ರಶಸ್ತಿ ವಿಜೇತರು ಹಾಗೂ ಹಳೆ ವಿದ್ಯಾರ್ಥಿನಿ ಕುಮಾರಿ ರಶ್ಮಿತಾ, ಹಿಂದಿ ಸ್ನಾತಕೋತರ ಪದವಿ, ಪ್ರಥಮ ರಾಂಕ್ ವಿಜೇತತರು ಇವರಿಗೆ ಸನ್ಮಾನ ನಡೆಯಲಿದೆ.
ಅಪರಾಹ್ನ 2:30ಕ್ಕೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಉದಯ ಕುಮಾರ್ ಜ್ಯೋತಿಗುಡ್ಡೆ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.















