ಬಂಟ್ವಾಳ :ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನವೋದಯ ಮಿತ್ರ ಕಲಾವೃಂದ ರಿ ಹಾಗೂ ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ 39ನೇ ವರುಷದ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ದೃಷ್ಠಿಯಿಂದ ಸಂಘದ ಜಂಟಿ ಸಭೆಯು ಇತ್ತೀಚೆಗೆ ಸಂಘದ ಸಭಾಂಗಣದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ನೂತನ ವಾರ್ಷಿಕೋತ್ಸವ ಸಮಿತಿಯನ್ನು ರಚಿಸಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಗೋಪಾಲ್ ಕುಲಾಲ್ ಗೋವಿಂತೋಟ ಸರ್ವಾನುಮತದಿಂದ ಆಯ್ಕೆಯಾದರು.
ಇತರ ಪದಾಧಿಕಾರಿಗಳು:
ಉಪಾಧ್ಯಕ್ಷರು ದೀಕ್ಷಿತ್ ಬೆರ್ವ ಹಾಗೂ ಮೀನಾಕ್ಷಿ ಧರ್ಣಪ್ಪ,
ಪ್ರ ಕಾರ್ಯದರ್ಶಿ ಮೋಹನ್ ಆಚಾರಿ, ಕೋಶಾಧಿಕಾರಿ ಸಂತೋಷ್ ಎನ್,ಜೊತೆ ಕಾರ್ಯದರ್ಶಿ ಚಿಂತನ್, ಕ್ರೀಡಾ ಕಾರ್ಯದರ್ಶಿ ಸೂರಜ್, ಕುಮಾರಿ ಸಿಂಚನ ಆಯ್ಕೆಯಾದರು.
















