ಬಂಟ್ವಾಳ : ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಕೊಡ್ಮಾಣ್, ಇದರ ಆಶ್ರಯದಲ್ಲಿ ಶ್ರೀ ಶಾರದಾ ಪೂಜಾ ಮಹೋತ್ಸವು ಅ.2 ರಿಂದ 5 ರವರೆಗೆ ದ ಕ ಜಿ ಪ ಹಿರಿಯ ಪ್ರಾಥಮಿಕ ಶಾಲೆಯ ಕೊಡ್ಮಾಣ್ ಇಲ್ಲಿನ ಶಾರದಾ ಮಂಟಪದಲ್ಲಿ ನಡೆಯಲಿದೆ.
ಅ 1ರಂದು ಪರಂಗಿಪೇಟೆ ವರದೇಶ್ವರ ಸನ್ನಿಧಿಯಲ್ಲಿ ಪ್ರಾರ್ಥನೆ ಕೈಗೊಂಡು ನಂತರ ಶೋಭಾಯಾತ್ರೆಯ ಮೂಲಕ ಶಾರದಾ ಮಾತೆಯ ವಿಗ್ರಹ ವನ್ನು ಉತ್ಸವ ಮಂಟಪಕ್ಕೆ ತರಲಾಗುವುದು.
ಅ.2 ಕ್ಕೆ ಬೆಳಿಗ್ಗೆ 6.20ಗಕ್ಕೆ ವೈದಿಕ ಕಾರ್ಯಕ್ರಮಗಳೊಂದಿಗೆ ಶಾರಧ ಪ್ರತಿಷ್ಠೆ, ಪ್ರತಿಷ್ಠಾ ಪೂಜೆ, ಮಹೋತ್ಸವದ ಉದ್ಘಾಟನೆ ಹಾಗೂ ಧ್ವಜಾರೋಹಣ
ನಡೆಯಲಿದೆ.
ಈ ಸಂದರ್ಭದಲ್ಲಿ,ಚತುರ್ವಿಂಶತಿ ನಾಳಿಕೇರ ಗಣಯಾಗ, ಚಂಡಿಕಾ ಯಾಗ, ಶ್ರೀ ಸೂಕ್ತ ಹೋಮ,ದುರ್ಗಾ ಹೋಮ, ಹಾಗೂ ಸ್ವಯಂವರ ಪಾರ್ವತಿ ಪೂಜೆ,ದುರ್ಗಾ ನಮಸ್ಕಾರ ಪೂಜೆ, ರಂಗ ಪೂಜೆ,ಅಕ್ಷರಾರಂಭ, ಆಯುಧ ಪೂಜಾ ಸೇವೆಗಳು ಜರುಗಲಿದೆ,ಈ ನಾಲ್ಕು ದಿನಗಳಲ್ಲಿಯೂ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಲಿದೆ














