ಬಂಟ್ವಾಳ :ಆಶೀರ್ವಾದ್ ಸೇವಾ ಸಂಘ ತುಂಬೆ ಮತ್ತು ಆಶೀರ್ವಾದ್ ಮಹಿಳಾ ಸೇವಾ ಸಂಘ ತುಂಬೆ ಇದರ ಅಶ್ರಯದಲ್ಲಿ ಆ.04ರಂದು ಆದಿತ್ಯವಾರ ದಿ. ಸೋಮಪ್ಪ ಪೂಜಾರಿ ಬೊಳ್ಳಾರಿ ಇವರ ಗದ್ದೆಯಲ್ಲಿ 10ನೇ ವರ್ಷದ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಜು 19ರಂದು ಆಶೀರ್ವಾದ್ ಸಂಘದಲ್ಲಿ ಹಿರಿಯರಾದ, ಸಂಘದ ಗೌರವ ಸಲಹೆಗಾರರಾದ ದೇವಪ್ಪ ಗೌಡ ಬೊಳ್ಳಾರಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಆಶೀರ್ವಾದ್ ಸೇವಾ ಸಂಘ ಮತ್ತು ಆಶೀರ್ವಾದ್ ಮಹಿಳಾ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.
ಆಟಿಡೊಂಜಿ ಗಮ್ಮತ್ತು ಕಾರ್ಯಕ್ರಮದ ದಿನ ಬೆಳಿಗ್ಗೆ 9.00 ಗಂಟೆಗೆ ಸೇವಾ ಜಾಗರಣ ವತಿಯಿಂದ ಭಾರತ ಮಾತ ಪೂಜಾನ ಕಾರ್ಯಕ್ರಮ ನಡೆಯಲಿದ್ದು, ಅತೀ ಹೆಚ್ಚು ಅಂಕ ಪಡೆದ ಪರಿಸರದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಗೂ ಸಾಧಕರಿಗೆ ಸನ್ಮಾನ, ಬೆಳಿಗ್ಗೆಯಿಂದ ಸಂಜೆಯ ವರೆಗೆ
ವನಸ್-ತೆನಸ್ ಸೇರಿದಂತೆ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಬಗೆಯ ಕ್ರೀಡೆಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ ತುಳು ಚಿತ್ರರಂಗದ ಖ್ಯಾತ ನಟ ನಟಿಯರು ಭಾಗವಹಿಸಲಿದ್ದು, ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಶೀರ್ವಾದ್ ಸೇವಾ ಸಂಘ ತುಂಬೆಯ ಗೌರವಾಧ್ಯಕ್ಷರು, ಅಧ್ಯಕ್ಷಗಳು, ಸರ್ವ ಸದಸ್ಯರು ವಿನಂತಿಸಿರುತ್ತಾರೆ.










