ಹೊೖಗೆಬಜಾರ್: ಮಾ.21, ಫ್ರೆಂಡ್ಸ್ ಕ್ರಿಕೆಟರ್ಸ್(ರಿ.) ಇದರ 25ನೇ ರಜತ ಮಹೋತ್ಸವ ಸಂಭ್ರಮ. ಸಾರ್ವಜನಿಕ ಶ್ರೀ ಶನಿಪೂಜೆ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ.

Coastal Bulletin
ಹೊೖಗೆಬಜಾರ್: ಮಾ.21, ಫ್ರೆಂಡ್ಸ್ ಕ್ರಿಕೆಟರ್ಸ್(ರಿ.) ಇದರ 25ನೇ ರಜತ ಮಹೋತ್ಸವ ಸಂಭ್ರಮ. ಸಾರ್ವಜನಿಕ ಶ್ರೀ ಶನಿಪೂಜೆ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ.

ಮಂಗಳೂರು: ಹೊೖಗೆಬಜಾರ್ ಫ್ರೆಂಡ್ಸ್ ಕ್ರಿಕೆಟರ್ಸ್ (ರಿ.) ಇದರ 25ನೇ  ರಜತ ಮಹೋತ್ಸವದ ಸಮಾರಂಭವು ಮಾ.21 ರಂದು ಶನಿವಾರ ಎಚ್.ಎಫ್.ಸಿ ಹೊೖಗೆಬಜಾರ್ ಮೈದಾನದಲ್ಲಿ ನಡೆಯಲಿದೆ.

ಸಂಜೆ 5 ಗಂಟೆಗೆ ಸಾರ್ವಜನಿಕ ಶನಿಪೂಜೆ ನಡೆಯಲಿದ್ದು, 7ಗಂಟೆಗೆ ಮಹಾ ಪೂಜೆ ಬಳಿಕ ಪ್ರಸಾದ ವಿತರಣೆ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿರುವುದು, 

ರಾತ್ರಿ 8 ಗಂಟೆಗೆ ಶಾಸಕ ಡಿ. ವೇದವ್ಯಾಸ್ ಕಾಮತ್ ಸಹಿತ

ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಂತರ ರಾತ್ರಿ 9:30ಗಂಟೆಗೆ ಚೈತನ್ಯ ಕಲಾವಿದರು ಬೈಲೂರು ಅಭಿನಯಿಸುವ ರಾಘು ಮಾಸ್ಟ್ರು ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Comment