ಬಂಟ್ವಾಳ :"ಪರೋಪಕಾರರ್ಥಂ ಇದಂ ಶರೀರಂ" ಎಂಬ ದ್ಯೇಯ ವಾಕ್ಯದೊಂದಿಗೆ ಸೇವಾ ಕಾರ್ಯಗಳನ್ನು ಮಾಡುವ ಉದ್ದೇಶದಿಂದ ಕಳೆದ ವರ್ಷ ಕಾರ್ಯರೂಪಕ್ಕೆ ಬಂದ ಯುವಶಕ್ತಿ ಸೇವಾಪಥ ಕಡೇಶಿವಾಲಯ ಎಂಬ ಸೇವಾ ಸಂಸ್ಥೆಯ ಪ್ರಥಮ ವಾರ್ಷಿಕ ಸಂಭ್ರಮದ ಸಮಾರಂಭವು ಜ 22ರಂದು ಆದಿತ್ಯವಾರ ಉಮಾಶಿವ ಕ್ಷೇತ್ರ ಕಲ್ಲಡ್ಕದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ 20 ಅಶಕ್ತ ಕುಟುಂಬಗಳಿಗೆ ನಿಧಿ ಹಸ್ತಾಂತರ ,ಮಿತ್ರ ಸಂಸ್ಥೆಗಳಿಗೆ
ಗೌರವರ್ಪಣೆ,ಯುವಶಕ್ತಿ ರಕ್ತ ನಿಧಿ, ಯುವಶಕ್ತಿ ಕಾರ್ಯಕರ್ತರ ಸಮಾಗಮ ನಡೆಯಲಿದೆ.ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.














