ನೆತ್ತರಕೆರೆ :ಶ್ರೀ ರಾಮ ನಾಮ ತಾರಕ ಜಪ ಯಜ್ಞ. ಆಕರ್ಷಕ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

Coastal Bulletin
ನೆತ್ತರಕೆರೆ :ಶ್ರೀ ರಾಮ ನಾಮ ತಾರಕ ಜಪ ಯಜ್ಞ. ಆಕರ್ಷಕ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

ಬಂಟ್ವಾಳ: ಪುದು,ಕೊಡ್ಮಾಣ್,ಕಳ್ಳಿಗೆ, ತುಂದೆ, ಅರ್ಕುಳ ಮತ್ತು ಮೇರಮಜಲು ಗ್ರಾಮಗಳನ್ನು ಕೇಂದ್ರವಾಗಿಟ್ಟುಕೊಂಡು ಡಿ 21ರಂದು ನಡೆಯುವ ಶ್ರೀ ರಾಮ ನಾಮ ತಾರಕ ಜಪ ಯಜ್ಞದ ಅಂಗವಾಗಿ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವೇದಮೂರ್ತಿ ಮುರಳಿ ಭಟ್ ಕಲ್ಲತಡಮೆ ಪ್ರಾರ್ಥಿಸಿ, ಬಳಿಕ ರಾಧಾ ಸುರಭಿ ಗೋ ಮಂದಿರದ ಭಕ್ತಿಭೂಷಣ್ ಪ್ರಭುಜೀ ಹಸಿರುವಾಣಿ ಹೊರೆ ಕಾಣಿಕೆ ಹೊತ್ತ ವಾಹನಕ್ಕೆ ತೆಂಗಿನ ಕಾಯಿ ಹೊಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಫರಂಗಿಪೇಟೆಯಿಂದ ನೆತ್ತರಕೆರೆಗೆ ಸಾಗಿದ ಹಸಿರು ವಾಣಿ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಚೆಂಡೆ ವಾದ್ಯ, ಮಾತೆಯರು, ಕುಣಿತ ಭಜನೆ ತಂಡಗಳು, ಭಕ್ತರು ತಂದ ಕಾಣಿಕೆಗಳನ್ನು ಅಲಂಕೃತ ವಾಹನಗಳಲ್ಲಿಟ್ಟು, ಭಜನೆ, ಜೈಕಾರಗಳೊಂದಿಗೆ ಉತ್ಸವ ಸ್ಥಳಕ್ಕೆ ಸಾಗಿ ಬಂತು.


ಬಳಿಕ ಉಗ್ರಾಣ ಮುಹೂರ್ತವನ್ನು ದೀಪ ಪ್ರಜ್ವಲನ ಮಾಡುವ ಮೂಲಕ ಶ್ರೀ ರಾಮ ನಾಮ ತಾರಕ ಜಪ ಯಜ್ಞದ ಮಾರ್ಗದರ್ಶಕರಾದ ಪ್ರಕಾಶ್ಚಂದ್ರ ರೈ, ದೇವಸ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ಚಂದ್ರಶೇಖರ ಗಾಂಭೀರ ಫರಂಗಿಪೇಟೆ, ರವೀಂದ್ರ ಕಂಬಳಿ ಸುಜೀರು, ಉಮೇಶ್ ಶೆಟ್ಟಿ ಬರ್ಕೆ, ಜ್ಯೋತಿಂದ್ರ ಶೆಟ್ಟಿ ಮುಂಡಾಜೆ ಗುತ್ತು, ಸತೀಶ್ ನಾಯ್ಗ ಕೊಡ್ಮಾಣ್, ಅನಿಲ್ ಪಂಡಿತ್,ಸುರೇಶ ಭಂಡಾರಿ ಅರ್ಬಿ, ಪದ್ಮನಾಭ ಶೆಟ್ಟಿ ಕೊಟ್ಟಿಂಜ, ಪದ್ಮನಾಭ ಶೆಟ್ಟಿ ಪುಂಚಮೆ, ಗಣೇಶ್ ಸುವರ್ಣ, ಪುರುಷೋತ್ತಮ್ ಕೊಟ್ಟಾರಿ ಮಾಡಂಗೆ, ಜಗದೀಶ್ ಎನ್, ಜಗದೀಶ ಪೂಜಾರಿ ಕುಮ್ಡೇಲ್, ಜಗದೀಶ ಕಡೆಗೋಳಿ, ರಾಘವ ಪೆರ್ಲಬೈಲು, ಗಿರೀಶ್ ಶೆಟ್ಟಿ ಕುಂಪನ

ಮಜಲು, ಸುಬ್ರಮಣ್ಯ ರಾವ್, ದೇವದಾಸ್ ಶೆಟ್ಟಿ ಕೊಡ್ಮಾಣ್ ಜಗದೀಶ ಬಂಗೇರ ಹೊಳ್ಳರಬೈಲು, ನವೀನ್ ಚಾಪೆ, ಸದಾನಂದ ನೆತ್ತರಕೆರೆ, ಭಾಸ್ಕರ ನೆತ್ತರಕೆರೆ,ಚಂದ್ರಹಾಸ ಎನ್, ಮೋಹನ್ ಆಚಾರ್ಯ, ಜಯರಾಮ ಶೆಟ್ಟಿ ಅಬ್ಬೆಟ್ಟು, ಹರೀಶ್ ಕಲ್ಲಜಾಲ್, ವಿಜಯ ಕಜೆಕಂಡ, ಮನೋಹರ ಕಂಜತ್ತೂರು, ರಾಮಚಂದ್ರ ಬಂಗೇರ ಮಾರಿಪಲ್ಲ, ರಮಾನಂದ ಶೆಟ್ಟಿ ಬೆಂಜನಪದವು,ಪ್ರತಾಪ್ ಆಳ್ವ ಸುಜೀರು ಗುತ್ತು, ಸಂದೇಶ್ ದರಿಬಾಗಿಲು,ಗೋಪಾಲ್ ಕುಲಾಲ್ ಗೋವಿಂತೋಟ,ಮೋಹನ್ ಕುಲಾಲ್, ಜಯಶ್ರೀ ಕರ್ಕೇರ ಮೇರಮಜಲು, ಶೈಲಜಾ ಪಿ ಶೆಟ್ಟಿ, ಸುಲೋಚನಾ ಶೆಟ್ಟಿ ಬೆಂಜನ ಪದವು, ಹರಿನಾಕ್ಷಿ ಸದಾನಂದ, ಮಾಲತಿ ಚಂದ್ರಹಾಸ, ಸುಶೀಲ ಶೇಖರ, ಅಮಿತಾ ವಿ ಪಚ್ಚಿನಡ್ಕ, ಶ್ರೀ ರಾಮ ತಾರಕ ಜಪ ಯಜ್ಞ ಸಮಿತಿಯ ಅಧ್ಯಕ್ಷ ದೇವದಾಸ್ ಕೆ ಆರ್ ಕೊಡ್ಮಾಣ್ ಸಂಯೋಜಕರಾದ ತೇವು ತಾರಾನಾಥ ಕೊಟ್ಟಾರಿ,ದಾಮೋದರ ನೆತ್ತರಕೆರೆ, ಕಾರ್ಯದರ್ಶಿ ಬಿನುತ್ ಕುಮಾರ್ ಕೋಶಾಧಿಕಾರಿ ಕಿಶೋರ್ ಕುಮಾರ್ ,ಹೊರೆ ಕಾಣಿಕೆ ಸಮಿತಿಯ ಪ್ರಮುಖರಾದ ಸಂತೋಷ ಕುಮಾರ್, ಯೋಗಿಶ್ ಕುಮ್ಡೇಲ್, ಸಂತೋಷ್ ಕೊಡ್ಮಾಣ್ ಮತ್ತಿತರರು ಇದ್ದರು.

Leave a Comment