ಬಂಟ್ವಾಳ :ಯಕ್ಷಕಲಾ ಪೊಳಲಿ ಹಾಗೂ ಯಕ್ಷಧ್ರುವ ಪೊಳಲಿ ಇದರ ಅಶ್ರಯದಲ್ಲಿ ಕೀರ್ತಿಶೇಷ ಗಾನಕೋಗಿಲೆ ದಿನೇಶ್ ಅಮ್ಮಣ್ಣಾಯರ ಸಂಸ್ಮರಣಾ ಕಾರ್ಯಕ್ರಮ "ರಸರಾಗ ಚಕ್ರವರ್ತಿಗೆ ರಸಾಭಿಷೇಕ"ವು ನ. 23ರಂದು ಆದಿತ್ಯವಾರ ಶ್ರೀ ಕ್ಷೇತ್ರ ಪೊಳಲಿಯಲ್ಲಿ ನಡೆಯಲಿದೆ.
ಅಂದು ಮಧ್ಯಾಹ್ನ ಗಂಟೆ 2 ರಿಂದ 5 ರವರೆಗೆ “ಯಕ್ಷಾಭಿಷೇಕ” ಸುಪ್ರಸಿದ್ದ ಕಲಾವಿದರಿಂದ 'ಸಾಯುಜ್ಯ ಸಂಪ್ರಾಪ್ತಿ' ಎಂಬ ಯಕ್ಷಗಾನ ನಡೆಯಲಿದೆ.
ಸಂಜೆ ಗಂಟೆ 5 ರಿಂದ 7 ರವರೆಗೆ "ನುಡಿ ನಮನಾಭಿಷೇಕ” ನಡೆಯಲಿದ್ದು ಕೀರ್ತಿಶೇಷ ದಿನೇಶ್ ಅಮ್ಮಣ್ಣಾಯರಿಗೆ ನುಡಿ ನಮನ ನಡೆಯಲಿದೆ. ಈ ಸಂದರ್ಭದಲ್ಲಿ
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಹಿತ ಅನೇಕ ಗಣ್ಯರು ಉಪಸ್ಥಿತರಿರುವರು.
ರಾತ್ರಿ 7ರಿಂದ 9ರವರೆಗೆ "ಗಾನಾಭಿಷೇಕ" ಸಲುವಾಗಿ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಗಾನ ವೈಭವ ನಡೆಯಲಿದೆ ಎಂದು ವೆಂಕಟೇಶ ನಾವಡ ಹಾಗೂ ಲೋಕೇಶ್ ಭರಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















