ಬಾಬುಗುಡ್ಡ: ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಆಹಾರ ದಿನಾಚರಣೆ ಹಾಗೂ ಮಾಹಿತಿ ಕಾರ್ಯಕ್ರಮ.

Coastal Bulletin
ಬಾಬುಗುಡ್ಡ: ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಆಹಾರ ದಿನಾಚರಣೆ ಹಾಗೂ ಮಾಹಿತಿ ಕಾರ್ಯಕ್ರಮ.

ಮಂಗಳೂರು :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ, ಅತ್ತಾವರ ಬಾಬುಗುಡ್ಡ ಅಂಗನವಾಡಿ ಕೇಂದ್ರ ಜಂಟಿ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಕುಡ್ಲ ಮಂಗಳೂರು ಇವರ ಸಹಯೋಗದಲ್ಲಿ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮ ನಗರದ ಬಾಬುಗುಡ್ಡೆಯಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಮಂಗಳೂರು ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾದ ಶ್ವೇತಾ ಎನ್ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ,ನಾವೆಲ್ಲ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದ್ದು ನಮ್ಮ ನಿತ್ಯ ಅವಶ್ಯಕತೆಗಳಲ್ಲಿ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ ಅದರಲ್ಲೂ ಪೌಷ್ಠಿಕ ಆಹಾರ ಸೇವನೆಯಿಂದ ಸದೃಡ ದೇಹ ನಮ್ಮದಾಗುತ್ತದೆ ಆಹಾರದ ಮಹತ್ವವನ್ನು ತಿಳಿಸುವ ದೃಷ್ಟಿಯಿಂದ ಪ್ರತಿವರ್ಷ ಅಕ್ಟೋಬರ್ 16ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸುತ್ತೇವೆ ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಕುಡ್ಲ ಮಂಗಳೂರು ಇದರ ಅಧ್ಯಕ್ಷರಾದ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಮಲ್ಲಿಕಟ್ಟೆ ಮಾಜಿ ಅಧ್ಯಕ್ಷರಾದ ನಿನೇಟ್, ಜೆಪ್ಪು ಆರೋಗ್ಯಧಿಕಾರಿ ಡಾ. ವಿದ್ಯಾ,ಕುದ್ಮುಲ್ ರಂಗರಾವ್ ಎಜ್ಯುಕೇಶನ್ ಟ್ರಸ್ಟ್ ಬಾಬುಗುಡ್ಡ

ಇದರ ಅಧ್ಯಕ್ಷ ಬಿ.ಆರ್ ಹೃದಯನಾಥ್, ಉಪಾಧ್ಯಕ್ಷ ಶ್ಯಾಮ ಕರ್ಕೇರ , ಬಬ್ಬುಸ್ವಾಮಿ ಕ್ಷೇತ್ರ ಶೆಟ್ಲೆಗ್ರಾಮ ಪ್ರಧಾನ ಕಾರ್ಯದರ್ಶಿ ರಘುವೀರ್ ಬಾಬುಗುಡ್ಡ, ಅಂಗನವಾಡಿ ಪಾಂಡೇಶ್ವರ ವಲಯ ಮೇಲ್ವಿಚಾರಕಿ ಅನುಪಮ,ಬಾಲ ವಿಕಾಸ ಸಮಿತಿ ಅಧ್ಯಕ್ಷ ಅರ್ಚನಾ ರೈ, ಬಿ.ಆರ್.ಪಿ ಲೈಲಾ ಕಿಶೋರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಮೈತ್ರಿ ಸ್ತ್ರಿಶಕ್ತಿ ಸಂಘ ಸದಸ್ಯರು, ವಿವಿಧ ಕೇಂದ್ರದ ಅಂಗನವಾಡಿ ಶಿಕ್ಷಕಿಯರು, ಬಾಲ ವಿಕಾಸ ಸಮಿತಿ ಸದಸ್ಯರು, ಉಪಸ್ಥಿತರಿದ್ದು, ಅವರುಗಳು ತಯಾರಿಸಿದ 56 ಬಗೆ ಬಗೆಯ ಪೌಷ್ಠಿಕ ಯುಕ್ತ ಆಹಾರವನ್ನು ಸಭೆಯಲ್ಲಿ ನೀಡಲಾಯಿತು.

ಅತ್ತಾವರ ಬಾಬುಗುಡ್ಡ ಅಂಗನವಾಡಿ ಶಿಕ್ಷಕಿ ಸುಜಾತ ಶೆಟ್ಟಿ ಸ್ವಾಗತಿಸಿ ಧನ್ಯವಾದವಿತ್ತರು ಬೋಳಾರ ಅಂಗನವಾಡಿ ಶಿಕ್ಷಕಿ ಶೋಭಾ ಶೆಟ್ಟಿ ಕಾರ್ಯಕ್ರಮ ನಿರುಪಿಸಿದರು.

Leave a Comment