Coastal Bulletin

ಬಂಟ್ವಾಳ: ಮೆಲ್ಕಾರ್ ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಕಡೆಗೋಳಿ ಶಾಖೆಯು ಆ. ೨೧ರಂದು ಬೆಳಗ್ಗೆ ೧೦.೩೦ಕ್ಕೆ ಪುದು ಗ್ರಾಮದ ಕಡೆಗೋಳಿಯ ಶ್ರೀ ನಾರಾಯಣ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸೊಸೈಟಿಯ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ತಿಳಿಸಿದರು.

ಅವರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ೨೦೧೨ರಲ್ಲಿ ಪ್ರಾರಂಭಗೊಂಡ ಸೊಸೈಟಿಯು ಈಗಾಗಲೇ ಪಚ್ಚಿನಡ್ಕ, ಕಕ್ಯಪದವು, ಅಜಿಲಮೊಗರಿನಲ್ಲಿ ಶಾಖೆಗಳನ್ನು ತೆರೆದಿದ್ದು, ಗ್ರಾಮೀಣ ಭಾಗದಲ್ಲೇ ತನ್ನ ಕಾರ್ಯಚಟುವಟಿಕೆಯನ್ನು ನಡೆಸುತ್ತಿದೆ.

ಸೊಸೈಟಿಯ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಅವರ ಅಧ್ಯಕ್ಷತೆಯಲ್ಲಿ ಶಾಖೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಲಿದ್ದು, ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಸೇಫ್ ಲಾಕರ್ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಉದ್ಯಮಿ ಜಗನ್ನಾಥ ಚೌಟ ಬದಿಗುಡ್ಡೆ, ಪುದು

ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಕಾಂಪ್ಲೆಕ್ಸ್ ಮಾಲಕಿ ಭಾರತಿ ಎನ್. ಭಾಗವಹಿಸಲಿದ್ದಾರೆ ಎಂದರು.

ಸೊಸೈಟಿಯು ೨೦೨೧-೨೨ನೇ ಸಾಲಿನಲ್ಲಿ ೬೫ ಕೋ.ರೂ.ವ್ಯವಹಾರ ಮಾಡಿ ೨೦ ಲಕ್ಷ ರೂ. ಲಾಭಗಳಿಸಿದೆ. ಒಟ್ಟು ೩ ಕೋ.ರೂ.ಹೂಡಿಕೆಗಳು, ೧೪ ಕೋ.ರೂ.ಠೇವಣಿ ಹೊಂದಿದ್ದು, ೧೧ ಕೋ.ರೂ.ಸಾಲ ವಿತರಿಸಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಉಪಾಧ್ಯಕ್ಷ ರಮೇಶ್ ಅನ್ನಪ್ಪಾಡಿ, ನಿರ್ದೇಶಕರಾದ ಕೆ.ಸಂಜೀವ ಪೂಜಾರಿ, ರತ್ನಾಕರ ಪೂಜಾರಿ ನಾಡಾರ್, ಉಮೇಶ್ ಸುವರ್ಣ ತುಂಬೆ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಉಪಸ್ಥಿತರಿದ್ದರು.

Leave a Comment