ನಾಯಿಲ: ಶ್ರೀ ಗೆಳೆಯರ ಬಳಗ (ರಿ) ಅಶ್ರಯದಲ್ಲಿ ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟ.

Coastal Bulletin
ನಾಯಿಲ: ಶ್ರೀ ಗೆಳೆಯರ ಬಳಗ (ರಿ) ಅಶ್ರಯದಲ್ಲಿ ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟ.

ಬಂಟ್ವಾಳ :ಓಂ ಶ್ರೀ ಗೆಳೆಯರ ಬಳಗ (ರಿ) ನಾಯಿಲ ನರಿಕೊಂಬು ಇದರ 19ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಓಂ ಶ್ರೀ ಪರ್ಬದ ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟ ಮಾ 16 ರಂದು ಬೆಳಿಗ್ಗೆ ಗಂಟೆ 10ಕ್ಕೆ ಉದ್ಘಾಟಿಸಲಾಯಿತು,

ಸಂಘದ ಅಧ್ಯಕ್ಷರು ಕಿರಣ್ ಅಟ್ಲುರವರ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ಲಿಂಗಪ್ಪ ಕೊಟ್ಟಾರಿ ಮಾಲಕರ ಲಕ್ಷ್ಮಿ ಗಣೇಶ ಸೌಂಡ್ಸ್, ಉದ್ಯಮಿಗಳಾದ ಉಮೇಶ್ ನೆಲ್ಲಿಗುಡ್ಡೆ, ಪ್ರವೀಣ್ ಬಂಜನ್ ಮರ್ದೋಳಿ, ದೈವದ ಅರ್ಚಕರಾದ ಲಕ್ಷ್ಮಣ್ ಪೂಜಾರಿ ಕೆದುಕೋಡಿ ಹಾಗೂ ಓಂ ಶ್ರೀ ಮಹಿಳಾ ಮಂಡಳಿಯ ಉಪಾಧ್ಯಕ್ಷೆ ದೀಪ ವೆಂಕಪ್ಪ ಉಪಸ್ಥಿತರಿದ್ದರು.

ಬಳಿಕ

ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು SKYS ನಾಟಿ, ದ್ವಿತೀಯ ಸ್ಥಾನವನ್ನು ಶ್ರೀರಾಮ್ ಫ್ರೆಂಡ್ಸ್ ಎರಮಲೆ ಪಡೆದಿದೆ, ಉತ್ತಮ ದಾಂಡಿಗ SKYS ನಾಟಿ ತಂಡದ ಅಕ್ಷಯ್ ಮತ್ತು ಉತ್ತಮ ಎಸೆತಗಾರ ಕೀರ್ತಿರಾಜ್ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಎರಮಲೆ ತಂಡದ ಶ್ರೀನಾಥ್ ಪಡೆದಿರುತ್ತಾರೆ. ಈ ಕೂಟದಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು.

Leave a Comment