ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತ್ರತ್ವದಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ 13 ದಿನಗಳ ಕಾಲ ನಡೆಯುವ ಗ್ರಾಮವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆ ಮಧ್ಯಾಹ್ನದ ವೇಳೆ ಪಾಣೆಮಂಗಳೂರು ರಘಸಪಲ್ಯ ಅವರ ಮನೆಗೆ ತಲುಪಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ರಘು ಸಪಲ್ಯ ಅವರ ಮನೆಯಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಪಾದಯಾತ್ರೆಯ ಸಂದರ್ಭದಲ್ಲಿ ಕಾರ್ಯಕರ್ತರು ದೇವರುಗಳು ಹಾಗೂ ಗ್ರಾಮದ ಜನರ ಅಭೂತಪೂರ್ವ ಸ್ಪಂದನೆ,ಗೌರವ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು. ಎಲ್ಲರನ್ನು ಜತೆಯಾಗಿಸಿಕೊಂಡು ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು,ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ಅವರು ತಿಳಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪಕ್ಣದ ಕಾರ್ಯಗಳ ಜೊತೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅತ್ಯಧಿಕ ಅಂತರದಲ್ಲಿ ಗೆಲುವು ಸಾಧಿಸಲು ಕಾರ್ಯಕರ್ತರು ಜೊತೆಯಾಗಿ ಕೆಲಸ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ , ರಾಜ್ಯ ಸರಕಾರದ ಯೋಜನೆಗಳನ್ನು, ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಮೂಲಕ ಗ್ರಾಮದ ಪ್ರತಿ ಮನೆ ಮನೆಗೆ ಕರಪತ್ರಗಳನ್ನು ನೀಡುವ ಕೆಲಸ ಮಾಡಬೇಕು, ಹಾಗೂ ಸದಸ್ಯರಾಗದೆ ಉಳಿದಿರುವರನ್ನು ಸದಸ್ಯರಾಗಿ ಸೇರ್ಪಡೆಗೊಳಿಸುವ ಕೆಲಸ ಆಗಬೇಕು.
ಪಕ್ಷ ಹಾಗೂ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಪ್ರಚುರಪಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಘು ಸಪಲ್ಯ, ದಿನೇಶ್ ಅಮ್ಟೂರು, ವಿನುತಾಪುರುಷೋತ್ತಮ್, ಕಿಶೋರ್ ಶೆಟ್ಟಿ,ಕಮಲಾಕ್ಷಿ ಪೂಜಾರಿ, ಪುರುಷೋತ್ತಮ ಸಾಲಿಯಾನ್
ನರಿಕೊಂಬು, ಯಶೋಧರ ಕರ್ಬೆಟ್ಟು, ನಂದರಾಮ ರೈ, ಪ್ರಕಾಶ್ ಮಡಿಮೊಗರು,ಸುರೇಶ್ ಕೋಟ್ಯಾನ್ ನರಿಕೊಂಬು,ಮಾದವ ಕರ್ಬೆಟ್ಟು, ಪ್ರೇಮನಾಥ್ ಶೆಟ್ಟಿ, ಪುರುಷೋತ್ತಮ ಟೈಲರ್, ಅರುಣ್ ಕುಲಾಲ್, ಉಷಾಲಾಕ್ಷಿ, ಮಮತಾ ಕರ್ಕೇರ, ಶುಭ ಶ್ರೀ, ರಂಜಿತ್ ಕೆದ್ದೆಲ್, ರವಿ ಅಂಚನ್, ಜಿನರಾಜ್ ಕೋಟ್ಯಾನ್, ನಾರಾಯಣ ಪೂಜಾರಿ, ರಂಜಿತ್ ಮಾಣಿಮಜಲು, ಆನಂದ ಶಂಭೂರು,ರತ್ನ, ಸುರೇಂದ್ರ, ಶ್ರೀಶ ರಾಯಸ, ಉದಯ ಶೆಟ್ಟಿ, ಸಂತೋಷ್, ಯೋಗೀಶ್, ಪುರುಷೋತ್ತಮ ನಾಟಿ, ಸವಿತಾ, ಸುಜಾತ, ಹೇಮ, ವಸಂತ ಭೀಮಗದ್ದೆ, ಆಶೋಕ್ ಮರ್ದೋಳಿ, ಮನೋಜ್ ನಿರ್ಮಲ್, ರೋಹಿತ್ ಮರ್ದೋಳಿ,ಯತೀಶ್ ಶೆಟ್ಟಿ, ಚೇತನ್ ಏಳಬೆ, ನಾರಾಯಣ ಪೂಜಾರಿ, ಗೋಪಾಲ ಏಳಬೆ, ಮಹೇಶ್ ರಾಯಸ, ಶಶಿಧರ್ ಮಾರುತಿನಗರ, ಪುರುಷೋತ್ತಮ ನಾಯ್ಕ್, ತಿಲಕ್ ರಾಜ್ ,ಭರತ್ ರಾಜ್, ಶೋಭಾ ಶೆಟ್ಟಿ , ಗಣೇಶ್ ಬೊಳಂತೂರು, ಚಿತ್ರಾವತಿಸುರೇಶ್ ಕುಲಾಲ್, ಯಶೋಧ ಮೊಗರ್ನಾಡು , ರಮನಾಥ್ ನಾಯಿಲ , ಮೋಹನ್, ವಿಶ್ವನಾಥ್ ಕೋಟ್ಯಾನ್, ರಾಜೇಶ್ ಬೊಳಂತೂರು, ನವೀನ್ ಕರ್ಬೆಟ್ಟು, ಪ್ರಶಾಂತ್ ಕರ್ಬೆಟ್ಟು, ಲೋಕೇಶ್ ಕರ್ಬೆಟ್ಟು, ಜಯಮಾಣಿಮಜಲು, ಸುನಿಲ್ ಮರ್ದೋಳಿ,ರಿತೇಶ್ ಅಂತರ ರಾಮಚಂದ್ರ ಪೈ, ಜಯಕರ ಅಂತರ, ಶಶಿಕಿರಣ್, ಪ್ರಭಾಕರ ಏಳಬೆ, ವರುಣ್, ಸದಾನಂದ ಗೌಡ, ಮತ್ತಿತರರು ಉಪಸ್ಥಿತರಿದ್ದರು.














