ಕಲ್ಲಡ್ಕ: ಡಿ. 21ರಂದು ಶ್ರೀ ರಾಮ ವಿದ್ಯಾ ಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ-2025. 3900 ಪ್ರತಿಭೆಗಳ ಸಂಗಮ, 19 ವಿವಿಧ ಸಾಹಸ ಪ್ರದರ್ಶನ, ಮೈಸೂರ್ ಒಡೆಯರ್ ಭಾಗಿ.

Coastal Bulletin
ಕಲ್ಲಡ್ಕ: ಡಿ. 21ರಂದು ಶ್ರೀ ರಾಮ ವಿದ್ಯಾ ಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ-2025. 3900 ಪ್ರತಿಭೆಗಳ ಸಂಗಮ, 19 ವಿವಿಧ ಸಾಹಸ ಪ್ರದರ್ಶನ, ಮೈಸೂರ್ ಒಡೆಯರ್ ಭಾಗಿ.

ಬಂಟ್ವಾಳ :ಶ್ರೀ ರಾಮ ವಿದ್ಯಾ ಕೇಂದ್ರ (ರಿ) ಹನುಮಾನ್ ನಗರ ಕಲ್ಲಡ್ಕ ಇಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ-2025, ಡಿ. 21ರಂದು ಆದಿತ್ಯವಾರ ಸಂಜೆ 6ರಿಂದ ನಡೆಯಲಿದೆ ಎಂದು ಶ್ರೀ ರಾಮ ವಿದ್ಯಾ ಕೇಂದ್ರದ ಸಂಸ್ಥಾಪಕರು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಅವರು ಬಿ ಸಿ ರೋಡ್ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲಿದ್ದು 3900 ಪ್ರತಿಭೆಗಳ ಸಂಗಮವಾಗಲಿದೆ ಹಾಗೂ 19 ವಿವಿಧ ಸಾಹಸಮಯ ಕ್ರೀಡೆ ಪ್ರದರ್ಶನಗೊಳ್ಳಲಿದೆ ಎಂದರು, ಹೊನಲು ಬೆಳಕಿನ ಕ್ರೀಡೋತ್ಸವ 2025ರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್, ರಾಜ ವಂಶಸ್ಥರು ಹಾಗೂ ಮೈಸೂರ್ ಲೋಕಸಭಾ ಸದಸ್ಯರು, ಪ್ರಕಾಶ ಬೆಳವಾಡಿ ಖ್ಯಾತ ಚಲನಚಿತ್ರ ನಟ, ನಿರ್ಮಾಪಕ, ಮನೋಜ್ ಸಿಂಗ್ ಛೇರ್ಮನ್ ಬ್ರಹ್ಮ ವರ್ಧ ಗ್ರೂಪ್ ಲಕ್ನೋ,ಸೀಮಾ ಬಿ ಆರ್ ಶೆಟ್ಟಿ ಚೆರ್ಮನ್ ಸೂಟ್ ಪಟ್ಟಂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತಿರುವನಂತಪುರಂ, ಉಮೇಶ್ ರಘುವಂಶಿ ಸೀನಿಯರ್ ಅಸೋಸಿಯೇಟ್ ಎಡಿಟರ್

ಹಿಂದೂಸ್ತಾನ್ ಟೈಮ್ಸ್ ಲಕ್ನೋ , ಡಾ ವಿಜಯ ಜಿ ಕಲಾಂತ್ರಿ ಚೆರ್ಮನ್ MVURDC ವರ್ಲ್ಡ್ ಟ್ರೇಡ್ ಸೆಂಟರ್ ಮುಂಬೈ, ರವಿಕಾಂತ್ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಲಿಗನ್ಸ್ ಎಂಟರ್ಪ್ರೈಸಸ್ ಬೆಂಗಳೂರು , ಡಾ ಶಿಶಿರ ಶೆಟ್ಟಿ ಪ್ರೊಫೆಸರ್ ಎ ಬಿ ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಸಂಪತ್ ಶೆಟ್ಟಿ ಚೆರ್ಮನ್ ಶ್ರೀ ಕೃಷ್ಣ ಪ್ರಸಾದ್ ಗ್ರೂಪ್ ಉಡುಪಿ, ಇವರ ಸಹಿತ ಅನೇಕ ಗಣ್ಯರು ಭಾಗವಹಿಸುವರು ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಶ್ರೀರಾಮ ವಿದ್ಯಾ ಕೇಂದ್ರದ ಅಧ್ಯಕ್ಷ ಬಿ ನಾರಾಯಣ ಸೋಮಾಯಜಿ, ಸಂಚಾಲಕ ವಸಂತ ಮಾಧವ, ಕಾರ್ಯನಿರ್ವಾಹಣಾಧಿಕಾರಿ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ ಉಪಸ್ಥಿತರಿದ್ದರು.

Leave a Comment