ದೇವಂದಬೆಟ್ಟು: ಸಾಯಿ ಶಕ್ತಿ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಉದ್ಘಾಟನಾ ಸಮಾರಂಭ.

Coastal Bulletin
ದೇವಂದಬೆಟ್ಟು: ಸಾಯಿ ಶಕ್ತಿ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಉದ್ಘಾಟನಾ ಸಮಾರಂಭ.

ಬಂಟ್ವಾಳ, ಶ್ರೀ ಸಾಯಿ ಶಕ್ತಿ ಚಾರಿಟೇಬಲ್ ಟ್ರಸ್ಟ್ (ರಿ). ಇದರ ಉದ್ಘಾಟನಾ ಸಮಾರಂಭವು ಡಿ.17ರಂದು ಆದಿತ್ಯವಾರ ತಾಲೂಕಿನ ಕಳ್ಳಿಗೆ ಗ್ರಾಮದ ಶ್ರೀ ಲಕ್ಷೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು, ಬ್ರಹ್ಮರಕೊಟ್ಲು ಇಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ, ಕೆ. ವೆಂಕಟರಮಣ ಅಸ್ಣಣ್ಣ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಕಟೀಲು ಮಾತನಾಡಿ, ಸಮಾಜದ ಬಡವರಿಗೆ ದಾನ, ಅಂಗ ವಿಕಲರಿಗೆ ಸಹಾಯ, ಮನೆ ನಿರ್ಮಾಣ, ಬಡ ಹೆಣ್ಣುಮಕ್ಕಳ ಉಚಿತ ಶಿಕ್ಷಣ, ಮದುವೆ, ಇನ್ನಿತರ ಸೇವಾ ಕೆಲಸಗಳಲ್ಲಿ ,ತೋಡಾಗಿಸಿಕೊಂಡು ಉತ್ತಮ ಸಂಸ್ಥೆಯಾಗಿ ಸಮಾಜದಲ್ಲಿ ಸಾಗಿ ಹೆಸರು ಗಳಿಸಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಸಾಯಿ ಸೂರಜ್ ದಕ್ಷಿಣ ಶಿರ್ಡಿ ಸಾಯಿ ಮಂದಿರ ಶಂಭೂರು ರಾಜೇಂದ್ರ ಶೆಟ್ಟಿ

ಉದ್ಯಮಿ, ಕು.ಸುಕನ್ಯಾ ಕಾಂತಾರ ಚಲನ ಚಿತ್ರನಟಿ ಹಾಗೂ ನಮ್ಮ ಟಿ. ವಿ. ನಿರೂಪಕಿ. ರವಿ ಕುಮಾರ್ ಭಟ್, ಕರ್ನಾಟಕ ಅಖಿಲ ಬ್ರಹ್ಮಣ ಪರಿಷತ್ ಅಧ್ಯಕ್ಷರು, ಅರ್ಜುನ್ ಭಂಡಾರ್ಕರ್ ಉದ್ಯಮಿ, ರಾಘವೇಂದ್ರ ಕಾರಂತ್, ಜನಾರ್ಧನ್ ಸಾಲ್ಯಾನ್ ಮುಂಡಾಜೆ, ಆನಂದಿ ಕಾರಂತ್ ದೇವಂದಬೆಟ್ಟು, ಪ್ರಮೀಳಾ ಮಾಣುರು ಸ್ಥಾಪಕಾಧ್ಯಕರು, ಶ್ರೀ ಸಾಯಿ ಚಾರಿಟೇಬಲ್ ಟ್ರಸ್ಟ್ ಉಪಸ್ಥಿತರಿದ್ದರು.

ಸಂಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ನಡೆಯಿತು.

Leave a Comment