ಬಂಟ್ವಾಳ ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಕೊಡ್ಮಾಣ್ ಇದರ ಅಶ್ರಯದಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಪ್ರತಿಷ್ಠಾಪನೆಯ ಅಂಗವಾಗಿ ಡಿ.16ರ ಸೂರ್ಯಸ್ತದಿಂದ ಡಿ 17ರ ಸೂರ್ಯೋದಯದವರೆಗೆ ಅಹೋರಾತ್ರಿ ಶ್ರೀ ರಾಮ ನಾಮ ತಾರಕ ಜಪ ಮಂತ್ರದ ಪಠಣ ಕಾರ್ಯಕ್ರಮವು ಕೊಡ್ಮಾಣ್ ಶ್ರೀ ಶಾರದಾ ಪೂಜಾ ಸೇವಾ ವೇದಿಕೆಯ ಕಟ್ಟಡದಲ್ಲಿ ನಡೆಯಿತು.
"ಶ್ರೀರಾಮ ಜಯ ರಾಮ ಜಯಜಯ ರಾಮ" ಎಂಬ ಶ್ರೀರಾಮ ಮಂತ್ರ ಸ್ತುತಿಸಿ, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ವೆಂಕಟೇಶ ನಾವಡ ಪೊಳಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ವಿವೇಕಾನಂದ ಆಳ್ವ ಕೊಡ್ಮಾಣ್,ಲಕ್ಷ್ಮಿಕಾಂತ್ ನಾಯಕ್, ಕೆ ಆರ್ ದೇವದಾಸ, ಮುರಾರಿ ಕಾಂಜಿಲಕೋಡಿ, ಸತೀಶ್ ನಾಯ್ಗ ಕೊಡ್ಮಾಣ್ ಕೋಡಿ, ನವೀನ
ನಾಯ್ಕ್ ಕೊಡ್ಮಾಣ್, ಗೋಪಾಲ ಕುಲಾಲ್ ಗೋವಿಂದೋಟ, ಪದ್ಮನಾಭ ಶೆಟ್ಟಿ, ಕೊಟ್ಟಿಂಜ, ರಾಮಪ್ಪ ಕಾಪಿಕಾಡ್, ರವೀಂದ್ರ ನಾಯ್ಕ್ ಪೊನ್ನೋಡಿ, ದಾಮೋದರ ನೆತ್ತರಕೆರೆ, ಹರೀಶ ಕಲ್ಲಜಾಲ್, ದಿವಾಕರ ಕೊಡ್ಮಾಣ್, ಕೊರಗಪ್ಪ ಮೂಲ್ಯ ಪೈಕ,ಸವಿತಾ ಮೋಹನ್, ಹರಿನಾಕ್ಷಿ, ಶೈಲಜಾ ಪಿ ಶೆಟ್ಟಿ, ಚಂದ್ರಾವತಿ ಕಲ್ಲಜಾಲ್, ಶಾಲಿನಿ ಚಾಪೆ ಭವಾನಿ ಆಳ್ವ ಪೊನ್ನೋಡಿ, ಪಾರ್ವತಿ ಎಂ ಶೆಟ್ಟಿ, ಲೀಲಾವತಿ ಕಲ್ಲಜಾಲ್ ಮತ್ತಿತರರು ಉಪಸ್ಥಿತರಿದ್ದರು.














