ಫರಂಗಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ. ರೂ 19.16 ಲ.ನಿವ್ವಳ ಲಾಭ, ಶೇ.10 ಡಿವಿಡೆಂಡ್ ವಿತರಣೆ: ಪದ್ಮನಾಭ ಶೆಟ್ಟಿ ಪುಂಚಮೆ.

Coastal Bulletin
ಫರಂಗಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ. ರೂ 19.16 ಲ.ನಿವ್ವಳ ಲಾಭ, ಶೇ.10 ಡಿವಿಡೆಂಡ್ ವಿತರಣೆ: ಪದ್ಮನಾಭ ಶೆಟ್ಟಿ ಪುಂಚಮೆ.

ಬಂಟ್ವಾಳ: ಫರಂಗಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನಲ್ಲಿ 87.45 ಕೋಟಿ ರೂ. ವ್ಯವಹಾರ ನಡೆಸಿ 19.16 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪದ್ಮನಾಭಶೆಟ್ಟಿ ಪುಂಚಮೆ ಅವರು ತಿಳಿಸಿದ್ದಾರೆ.

ಸೆ. 17ರಂದು ಬುಧವಾರ ಫರಂಗಿಪೇಟೆ ಸೇವಾಂಜಲಿ ಸಭಾಭವನದಲ್ಲಿ ನಡೆದ ಪ್ರಸಕ್ತಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಿಸಿದರು.

ಸಂಘವು ಈ ವರ್ಷಾಂತ್ಯಕ್ಕೆ ರೂ. 20.25 ಕೋಟಿ ರೂ ಠೇವಣಿ ಹೊಂ ದಿದ್ದು, 7.08 ಕೋಟಿಯಿಂದ 8.23 ಕೋಟಿಗೆ ಹೂಡಿಕೆ, ದುಡಿಯುವ ಬಂಡವಾಳವನ್ನು 20.79 ಕೋಟಿ ಯಿಂದ 21.74 ಕೋಟಿಗೆ ಹೆಚ್ಚಿ ಸಲು ನಿರ್ಧರಿಸಲಾಗಿದೆ. ಆಡಿಟ್

ವರ್ಗಿಕರಣದಲ್ಲಿ 'ಬಿ' ತರಗತಿಯನ್ನು ಪಡೆದಿದೆ, ಸಾಲ ವಸೂಲಾತಿಯಲ್ಲಿ 94.60% ಪ್ರಗತಿ ದಾಖಲಿಸಿರುತ್ತದೆ

ಎಂದರು. ಇದೇ ವೇಳೆ ದಿವ್ಯಾಂಗರಿಗೆ ಸಹಾಯಧನ ವಿತರಿಸಲಾಯಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಮಲ ಬಿ.ಅವರು ವಾರ್ಷಿಕ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಸಂಘದ ಉಪಾಧ್ಯಕ್ಷ ಪುರುಷೋತ್ತಮ ಅಬ್ಬೆಟ್ಟು ನಿರ್ದೆಶಕರಾದ ಸುಬ್ರಹ್ಮಣ್ಯ ರಾವ್ ಹೊಯಿಗೆಗದ್ದೆ, ಸಂತೋಷ್ ಕುಮಾರ್ ನೆತ್ತರಕೆರೆ, ಪ್ರತಾಪ್ ಕುಮಾರ್ ಆಳ್ವ ಸುಜೀರು, ಜೀವನ್ ಪ್ರಕಾಶ್ ಡಿ ಸೋಜಾ ಬಡ್ದುರು. ಬಳ್ಳೂರು, ಹರೀಶ್ ಕುಮಾರ್ ಕೊಡ್ಮಾಣ್, ಪ್ರವೀಣ್, ಸುನೀಲ್ ಫೆರ್ನಾಂಡಿಸ್, ಜಯಾನಂದ ನಾಯ್ಕ ಕುಮ್ಡೇಲು, ಶೈಲಜಾ ಪಿ. ಶೆಟ್ಟಿ ಕೊಟ್ಟಿಂಜ, ವನಿತಾ ಶೆಟ್ಟಿ ಇದ್ದರು.

Leave a Comment