ಬಂಟ್ವಾಳ ತಾಲೂಕಿನಲ್ಲಿ ಕರ್ಪೆ ಗ್ರಾಮದ ರೈತರ ಬೇಳೆ ಸಮೀಕ್ಷೆಯನ್ನು ಶೇ 100 ರಷ್ಟು ಮಾಡುವುದರೊಂದಿಗೆ ಬಂಟ್ವಾಳ ತಾಲೂಕಿನಲ್ಲೇ ಕರ್ಪೆ ಗ್ರಾಮ ಪೂರ್ತಿ ಬೇಳೆ ಸಮೀಕ್ಷ ಗ್ರಾಮವಾಗಿದೆ.
ಬೆಳೆ ಸಮೀಕ್ಷೆ ಗ್ರಾಮಕ್ಕೆ ಕಾರಣಿಕರ್ತರಾಗಿರುವ ಕೃಷಿ ಇಲಾಖೆಯ ಖಾಸಗಿ ನಿವಾಸಿಯಾಗಿರುವ ಕಾರ್ತಿಕ್ ನಾಯಕ್ ಕರ್ಪೆ ರವರನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ
ವೀಣಾ ಕೆ. ಆರ್.ರವರು ಗುರುತ್ತಿನ ಕಾಣಿಕೆ ನೀಡಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ತಾಂತ್ರಿಕ ಕೃಷಿ ಅಧಿಕಾರಿ ನಂದನ್ ಶೆಣೈ ಉಪಸ್ಥಿತರಿದ್ದರು.















