Coastal Bulletin

ಬಂಟ್ವಾಳ: ಹುಟ್ಟಿನಿಂದಲೇ ಕಲಾ ನೈಪುಣ್ಯತೆ ಕರಗತ ಮಾಡಿಕೊಂಡಿರುವ ವಿಶ್ವಕರ್ಮ ಸಮುದಾಯವು ಮುಖ್ಯವಾಹಿನಿಗೆ ಬಂದು ಸ್ವಾಭಿಮಾನದ ಜೀವನ ನಡೆಸಲು ನಾವೆಲ್ಲರೂ ಸಂಘಟಿತರಾಗಿ ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯಬೇಕು ಎಂದು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲು ಹೇಳಿದ್ದಾರೆ.

ಇಲ್ಲಿನ ವಿಶ್ವಕರ್ಮ ಸಮುದಾಯ ಭವನದಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಶನಿವಾರ ನಡೆದ 29ನೇ ವರ್ಷದ ವಿಶ್ವಕರ್ಮ ಪೂಜಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ವಾಸ್ತುತಜ್ಞ ಆದರ್ಶ ವಿ.ಪಿ., ಮೂಲ್ಕಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಕುಸುಮಾಧರ್ ಕೆ., ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ ಆಚಾರ್ಯ ಶುಭ ಹಾರೈಸಿದರು.

ಇದೇ ವೇಳೆ ಯಕ್ಷಗಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಸಹಿತ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮತ್ತು ಗರಿಷ್ಟ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ

ನಡೆಯಿತು.

ಸಂಘದ ಗೌರವಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ, ಲೋಕೇಶ ಆಚಾರ್ಯ ಪುಂಜಾಲಕಟ್ಟೆ, ಉಪಾಧ್ಯಕ್ಷ ಯಶೋಧರ ಆಚಾರ್ಯ ಪೂಪಾಡಿಕಟ್ಟೆ, ವಿಶ್ವಜ್ಯೋತಿ ಮಹಿಳಾ ಮಂಡಳಿ ಅಧ್ಯಕ್ಷೆ ಪ್ರತಿಮಾ ಉಪೇಂದ್ರ ಆಚಾರ್ಯ, ಧಾರ್ಮಿಕ ಕಾರ್ಯದರ್ಶಿ ನಾರಾಯಣ ಆಚಾರ್ಯ ಕಳ್ಳಿಗೆ, ಪುರೋಹಿತ ರಮೇಶ ಆಚಾರ್ಯ, ಕಾರ್ಯದರ್ಶಿ  ಸಂದೀಪ್ ಬಿ.ಆಚಾರ್ಯ, ಪ್ರಮುಖರಾದ ಜಯಪ್ರಕಾಶ್ ಆಚಾರ್ಯ ಭಂಡಾರಿಬೆಟ್ಟು, ಸ್ವಣೋದ್ಯಮಿ ಸುನಿಲ್ ಬಿ.ಆಚಾರ್ಯ, ಜಯಚಂದ್ರ ಸರಪಾಡಿ, ಸುಧಾಕರ್ ಆಚಾರ್ಯ ತುಂಬೆ ಮತ್ತಿತರರು ಇದ್ದರು.

ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಭೇಟಿ ನೀಡಿ ವಿಶ್ವಕರ್ಮ ಪೂಜೆಯಲ್ಲಿ ಪಾಲ್ಗೊಂಡರು.

Leave a Comment