Coastal Bulletin

ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಆರೋಗ್ಯ ತಪಾಸಣೆ ಸಹಿತ ಸ್ಯಾನಿಟೈಸರ್ ನೀಡಿ ತರಗತಿಗೆ ಕಳುಹಿಸುತ್ತಿರುವ ದೃಶ್ಯ ಕಂಡು ಬಂದಿದೆ. ಮುಖ್ಯ ಶಿಕ್ಷಕಿ ಲವಿನಾ ಸಬಿತಾ ಪಿಂಟೋ ಮತ್ತಿತರರು ತಪಾಸಣೆ ನಡೆಸುತ್ತಿರುವುದು ಕಂಡು ಬಂತು.

ಕೋವಿಡ್ ಹಿನ್ನೆಲೆಯಲ್ಲಿ ಸುಧೀರ್ಘ ಅವಧಿಯಿಂದ ಮುಚ್ಚಿದ್ದ ಪ್ರೌಢಶಾಲೆಗಳಿಗೆ ಜಿಲ್ಲಾಡಳಿತದ ಮಾರ್ಗದರ್ಶನದಂತೆ ಶುಕ್ರವಾರದಿಂದ ತರಗತಿ ಪುನರ್ ಆರಂಭಗೊಂಡಿದೆ.

ಇಲ್ಲಿನ ಒಟ್ಟು 99 ಪ್ರೌಢಶಾಲೆಗಳ ಪೈಕಿ 8,9,10ನೇ ತರಗತಿ ಮಾತ್ರ ಆರಂಭಗೊಂಡಿದ್ದು ಇವರಿಗೆ ಮಧ್ಯಾಹ್ನ ತನಕ ತರಗತಿ ನಡೆದಿದೆ. ಉಳಿದಂತೆ ಇದೇ 20ರಿಂದ (ಸೋಮವಾರ) ಪ್ರಾಥಮಿಕ ಶಾಲಾ ವಿಭಾಗದಲ್ಲಿ 6,7,8 ನೇ ತರಗತಿ ಆರಂಭಗೊಳ್ಳಲಿದೆ. 8ನೇ ತರಗತಿಗೆ ಮಧ್ಯಾಹ್ನ ನಂತರ ತರಗತಿ ನಡೆಯಲಿದ್ದು, ಪ್ರತೀ ತರಗತಿಯಲ್ಲಿ 20 ಮಂದಿ ವಿದ್ಯಾರ್ಥಿಗಳ ತಂಡ

ರಚಿಸಿದ ಬಳಿಕ ಪರಸ್ಪರ ಅಂತರದಲ್ಲಿ ತರಗತಿ ನಡೆಸಲಾಗುತ್ತದೆ. ವಿದ್ಯಾರ್ಥಿಗಳು  ಶಾಲೆಗೆ ಬರುತ್ತಲೇ ಅವರನ್ನು ಆರೋಗ್ಯ ತಪಾಸಣೆಗೊಳಿಸಿ, ಸ್ಯಾನಿಟೈಸ್ ನೀಡಿ ತರಗತಿಗೆ ಕಳುಹಿಸಲಾಗುತ್ತದೆ ಎಂದು ಶಿಕ್ಷಣಾಧಿಕಾರಿ ಜ್ಞಾನೇಶ್ ತಿಳಿಸಿದ್ದಾರೆ. 

ಆಕ್ಷೇಪ

ಇಲ್ಲಿನ ಬಹುತೇಕ ಖಾಸಗಿ ಶಾಲೆಗಳಲ್ಲಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಶಿಕ್ಷಕರು ಸಂಗ್ರಹಿಸಿ ಹಳೆ ಪಠ್ಯ ಪುಸ್ತಕ ವಿತರಿಸಲಾಗಿದ್ದು, ಇದೀಗ ಸರಕಾರ  ಮುದ್ರಿಸಿ ರವಾನಿಸಿದ ಹೊಸ ಪುಸ್ತಕ ಖರೀದಿಗೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂಬ ಆರೋಪ ಮಕ್ಕಳ ಪೋಷಕರಿಂದ ಕೇಳಿ ಬಂದಿದೆ.

Leave a Comment