Coastal Bulletin

ಮಂಗಳೂರು :ಕನ್ನಡ ಅನುದಾನಿತ ಶಾಲೆಗಳ ಅಭಿವೃದ್ಧಿ ಗೆ ಸರಕಾರ ಗಮನ ಹರಿಸಬೇಕು , ಶಿಕ್ಷಕರಿಲ್ಲದೆ ಸೊರಗುವ ಅನುದಾನಿತ ಶಾಲೆ ಗಳಿಗೆ ಶಿಕ್ಷರರನ್ನು ಒದಗಿಸಬೇಕು ಎಂದು ಶ್ರೀ ರಾಮ ಶಾಲೆ ಅರ್ಕುಳ ಫರಂಗಿಪೇಟೆ ಯ ಆಡಳಿತ ಮಂಡಳಿ ಕಾರ್ಯದರ್ಶಿ ಜಯರಾಮ ಶೇಖ ಹೇಳಿದರು.

ಆವರು,ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ ಮತ್ತು ಶ್ರೀರಾಮ ಪ್ರೌಢ ಶಾಲೆ ಅರ್ಕುಳ ಫರಂಗಿಪೇಟೆ ಸಹಯೋಗದಲ್ಲಿ ಶ್ರೀರಾಮ ಪ್ರೌಢ ಶಾಲೆ ಅರ್ಕುಳದಲ್ಲಿ ಸಾಹಿತ್ಯ ರಚನಾ ಕಮ್ಮಟ ವನ್ನು ಉದ್ಘಾಟಿಸಿ ಮಾತನಾಡಿದರು.

ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ . ಮಂಜುನಾಥ ಎಸ್ ರೇವಣಕರ್ ರವರು ಅದ್ಯಕ್ಷತೆಯನ್ನು ವಹಿಸಿಕೊಂಡಿದ್ದರು . ಶಾಲಾ ಸಂಚಾಲಕರಾದ ಗೋವಿಂದ ಶೆಣೈ , ಮಾಜಿ ಮುಖ್ಯಶಿಕ್ಷಕರಾದ ಕೆ ಆರ್ ದೇವದಾಸ್ , ಮುಖ್ಯ ಶಿಕ್ಷಕಿ

ಪ್ರಮೀಳಾ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ , ಸಾಹಿತಿಗಳಾದ ಡಾ ಮೀನಾಕ್ಷಿ ರಾಮಚಂದ್ರ , ಶ್ರೀ ರಘು ಇಡ್ಕಿದು , ಎನ್ ಸುಬ್ರಾಯ ಭಟ್ , ರತ್ನಾವತಿ ಜೆ ಬೈಕಾಡಿ, ಕೃಷ್ಣಪ್ಪ ನಾಯ್ಕ್ , ಉಪಸ್ಥಿತರಿದ್ದರು.

ಕೆ ಆರ್ ದೇವದಾಸ್ ರವರು ಸ್ವಾಗತಿಸಿದರು , ರಘು ಇಡ್ಕಿದು ವಂದಿಸಿದರು , ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ ಗೌರಾವಾಧ್ಯಕ್ಷರಾದ ಗಣೇಶ್ ಪ್ರಸಾದ್ ರವರು ನಿರೂಪಿಸಿದರು.

Leave a Comment