ಬಂಟ್ವಾಳ :ಶ್ರೀ ಕೊರಗಜ್ಜ ಸೇವಾ ಸಮಿತಿ ಕಡೆಗೋಳಿ ತುಂಬೆ - ಪುದು ಇದರ ಅಶ್ರಯದಲ್ಲಿ ಕಡೆಗೋಳಿ ಶ್ರೀ ಕೊರಗಜ್ಜ ಸನ್ನಿದಿಯಲ್ಲಿ ಸ್ವಾಮಿ ಕೊರಗಜ್ಜ ದೈವದ ಮೂರ್ತಿಗೆ ಪಂಚಾಮೃತ ಅಭಿಷೇಕ, ವಾರ್ಷಿಕ ಕೋಲ ಹಾಗೂ ಹರಕೆಯ ಕೋಲ ಸೇವೆಯು ಫೆ. 22ರಂದು ಆದಿತ್ಯವಾರ ಜರುಗಲಿದೆ.
ಅಂದು ಬೆಳಿಗ್ಗೆ10 ರಿಂದ ಸ್ವಾಮಿ ಕೊರಗಜ್ಜ ದೈವದ ಶಿಲಾಮಯ ಮೂರ್ತಿಗೆ ದಂಪತಿಗಳಿಂದ ಪಂಚಾಮೃತ ಅಭಿಷೇಕ,ಮಧ್ಯಾಹ್ನ12-30ಕ್ಕೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ,ಸಂಜೆ 7ರಿಂದ ಕೊರಗಜ್ಜ ದೈವಕ್ಕೆ
ಕೋಲ ಸೇವೆ,ಸಾಮೂಹಿಕ ಅಗೇಲು ಸೇವೆ, ಪ್ರಸಾದ ವಿತರಣೆ,ರಾತ್ರಿ10ರಿಂದ ಕೊರಗಜ್ಜ ದೈವಕ್ಕೆ ಹರಕೆಯ ಕೋಲ ಸೇವೆ ನಡೆಯಲಿದ ಎಂದು ಆಡಳಿತ ಮುಕ್ತೇಸರ ಭಾಸ್ಕರ ಚೌಟ ಕುಮ್ಡೇಲ್ ಪ್ರಕಟಣೆಯಲ್ಲಿ ತಿಳಿಸಿದೆ.















