ತುಂಬೆ :ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ. ಧರ್ಮ ಜೀವನದ ನಡೆ, ಧರ್ಮ ಪ್ರಜ್ಞೆಯಿಂದ ಬದುಕು ಹಸನು : ಸುಬ್ರಮಣ್ಯ ಶ್ರೀ

Coastal Bulletin
ತುಂಬೆ :ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ. ಧರ್ಮ ಜೀವನದ ನಡೆ, ಧರ್ಮ ಪ್ರಜ್ಞೆಯಿಂದ ಬದುಕು ಹಸನು : ಸುಬ್ರಮಣ್ಯ ಶ್ರೀ

ಬಂಟ್ವಾಳ :ಧರ್ಮ ಉಳಿಯಬೇಕಾದರೆ ಸದಾ ದೈವ ದೇವರ ಆರಾಧನೆ, ಆಚರಣೆ ಮಾಡಬೇಕು,ಧರ್ಮ ಜೀವನದ ನಡೆ, ಧರ್ಮ ಪ್ರಜ್ಞೆಯಿಂದ ಬದುಕು ಹಸನಾಗುತ್ತದೆ, ನಮ್ಮ ಹಿರಿಯರ ಶ್ರದ್ದೆ ನಂಬಿಕೆಯ ಜೀವನದಿಂದ ನಾವು ಇಂದು ಸುಸಂಸ್ಕೃತವಾಗಿ ಬದುಕು ಸಾಗಿಸುತ್ತಿದ್ದೇವೆ, ಇದನ್ನು ಮುಂದಿನ ತಲೆಮಾರಿಗೆ ಮುಟ್ಟಿಸುವ ಗುರುತರ ಜವಾಬ್ದಾರಿ ನಮ್ಮದು,ಮನಸ್ಸಿನನ್ನಲಿ ಭಕ್ತಿಧಾರೆ ಮೂಡಲು ರುದ್ರದೇವನಾದ ಮಹಾಲಿಂಗೇಶ್ವರನ ಅನುಗ್ರಹ ಅಗತ್ಯ,ಭಗವಂತನ ಸೇವೆಯಿಂದ ಸುಖ ಸಂಪತ್ತು,ಆಯುರಾರೋಗ್ಯ ಪ್ರಾಪ್ತಿಯಾಗುತ್ತದ ಎಂದು ಸುಬ್ರಮಣ್ಯ ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಅವರು ನೂತನವಾಗಿ ನಿರ್ಮಾಣಗೊಂಡ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಫೆ.17ರಂದು ಶನಿವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ದೀಪ ಬೆಳಗಿಸಿ ಆಶೀರ್ವಾಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಟಿವಿ ನಿರ್ದೇಶಕ ಶಿವಶರಣ್ ಶೆಟ್ಟಿ ವಹಿಸಿದ್ದರು,ವೇದಿಕೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ,ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಎಕ್ಸ್ಪರ್ಟ್ ಕಾಲೇಜಿನ ನಿರ್ದೇಶಕ ನರೇಂದ್ರ ನಾಯಕ್,ಮಾಜಿ ಜಿ ಪಂ ಸದಸ್ಯೆ ಮಮತಾ ಗಟ್ಟಿ,ಕರಾವಳಿ ಕಲರ್ ಕಾರ್ಟನ್ಸ್ ನ ಕೆ ಪಿ ಶೆಟ್ಟಿ,ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಕುಲಾಲ್,ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ,ತುಂಬೆ ಪದವಿ

ಪೂರ್ವ ಕಾಲೇಜಿನ ಪ್ರಾಂಶುಪಾಲ ಗಂಗಾಧರ ಆಳ್ವ ಕೆ ಎನ್,ಕಟ್ಟಡ ನಿರ್ಮಾಣ ಹಾಗೂ ಗುತ್ತಿಗೆದಾರ ದಿವಾಕರ್,ಉದ್ಯಮಿ ಐತಪ್ಪ ಆಳ್ವ ಸುಜೀರುಗುತ್ತು, ಮೊಡಂಕಾಪು ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಸುನೀಲ್ ವೇಗಸ್ ತುಂಬೆ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ,ತುಂಬೆ ಗ್ರಾ ಪಂ ಉಪಾಧ್ಯಕ್ಷ ಗಣೇಶ್ ಸಾಲ್ಯಾನ್ ತುಂಬೆ ಉಪಸ್ಥಿತರಿದ್ದರು.

ಬ್ರಹ್ಮಕಲಶ ಹಾಗೂ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಚಂದ್ರಪ್ರಕಾಶ ಶೆಟ್ಟಿ ಪ್ರಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು,ಭಾಸ್ಕರ್ ಕುಲಾಲ್ ಪೊರ್ಸಹಿತ್ತಲು ಧನ್ಯವಾದವಿತ್ತು, ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಇಂಚರ ಕಲಾವಿದರು ತುಂಬೆ ಕಲಾವಿದರಿಂದ ಕಂಡನಿ ಬುಡೆದಿ ತುಳು ಹಾಸ್ಯಮಯ ಸಾಮಾಜಿಕ ನಾಟಕ ಪ್ರದರ್ಶನಗೊಂಡು ಜನಮೆಚ್ಚುಗೆ ಪಡೆಯಿತು.

Leave a Comment