ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಇಂದು ಇಂಚರ ಕಲಾವಿದರು ತುಂಬೆ ಅಭಿನಯದ ಕಂಡನಿ ಬುಡೆದಿ ನಾಟಕ ಪ್ರದರ್ಶನ

Coastal Bulletin
ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಇಂದು ಇಂಚರ ಕಲಾವಿದರು ತುಂಬೆ ಅಭಿನಯದ ಕಂಡನಿ ಬುಡೆದಿ ನಾಟಕ ಪ್ರದರ್ಶನ

ಬಂಟ್ವಾಳ : ನೂತನವಾಗಿ ಪುನರ್ ನಿರ್ಮಾಣಗೊಳ್ಳುತ್ತಿರುವ ಬಂಟ್ವಾಳ ತಾಲೂಕಿನ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಕಲಾ ಶ್ರೀ ಸದಾಶಿವ ಡಿ.ತುಂಬೆ ಅವರ ನೇತೃತ್ವದಲ್ಲಿ ಇಂಚರ ಕಲಾವಿದರು ಹಾಗೂ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ದಿ. ಕೆ.ಎನ್.ಟೈಲರ್ ವಿರಚಿತ ಕಂಡನಿ ಬುಡೆದಿ ನಾಟಕ ಇಂದು ರಾತ್ರಿ 8.30 ಕ್ಕೆ ನಡೆಯಲಿದೆ.

ಹಿರಿಯ ಕಲಾವಿದರಾದ ಸದಾಶಿವ ಡಿ. ತುಂಬೆ , ಉಮೇಶ್ ಸುವರ್ಣ, ಸೀತಾರಾಮ ಕೋಟ್ಯಾನ್, ರಾಜೇಶ್ ಆಚಾರ್ಯ ಕಡೆಗೋಳಿ, ಬೇಬಿ ತುಂಬೆ, ಚಂದ್ರಹಾಸ್ ಕಡೆಗೋಳಿ, ಸುಧೀರ್ ತುಂಬೆ, ಮಾ, ಪ್ರಧಿ ಇವರ ಜೊತೆ ಖ್ಯಾತ ಹಾಸ್ಯ ಕಲಾವಿದರಾದ ಸುರೇಶ್ ಸುವರ್ಣ ಕುದ್ಕೋಳಿ, ವಿಶ್ವನಾಥ ರಾವ್ ಬಿ.ಸಿ.ರೋಡ್ ಅಭಿನಯಿಸಲಿರುವರು. ತಂಗವೇಲು ಅವರ ಸಂಗೀತ ವಿದ್ದು, ಭಾಸ್ಕರ ರಾವ್ ಬಿ.ಸಿ.ರೋಡ್ ಮತ್ತು ಸದಾಶಿವ ಡಿ.ತುಂಬೆ ಅವರ ಸಾಹಿತ್ಯ ಹಿನ್ನೆಲೆ ಗಾಯನವಿದೆ.

ಮೇಧಾವಿ ಸೃಜನಾ ಆರ್ಟ್ಸ್ ಮಡಂತ್ಯಾರು ಅವರ ರಂಗ ಸಜ್ಜಿಕೆ ಇದ್ದು,ಆನಂದ ಕುಲಾಲ್ ಸಹಕಾರವಿದೆ. ಸವ್ಯರಾಜ್ ಕಲ್ಲಡ್ಕ ಅವರ ಪ್ರಸಾಧನವಿದೆ. ತಾಂಬೂಲ ಕಲಾವಿದರು ಪುಂಜಾಲಕಟ್ಟೆ ಅವರ ಧ್ವನಿ, ಬೆಳಕು, ಸುರೇಶ್ ಕುಲಾಲ್ ಮತ್ತು ಶಿವರಾಜ್ ಹೆಗ್ಡೆ ಸಂಯೋಜನೆ ಇದೆ. ರತ್ನದೇವ್ ಪುಂಜ ಅವರು ನಾಟಕ ನಿರ್ದೇಶಿಸಿದ್ದು, ಅಭಿನಯಿಸಲಿದ್ದಾರೆ. 

ದಿ.ಕೆ.ಎನ್ .ಟೇಲರ್ ಅವರ ಈ ನಾಟಕ ಸಾವಿರಾರು ಪ್ರದರ್ಶನ ಕಂಡಿದೆ. ಸಾಮಾಜಿಕ, ಹಾಸ್ಯಮಯ ಕೌಟುಂಬಿಕ ಕಥಾ ಹಂದರವಿದ್ದು, ಪತಿ ಪತ್ನಿಯ ಸಾಂಸಾರಿಕ ಕತೆಯಿದೆ.

Leave a Comment