ತುಂಬೆ :ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ. ವಿಶ್ವದ ಧರ್ಮ ಚಾವಡಿ ಭಾರತ: ಒಡಿಯೂರು ಶ್ರೀ

Coastal Bulletin
ತುಂಬೆ :ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ. ವಿಶ್ವದ ಧರ್ಮ ಚಾವಡಿ ಭಾರತ: ಒಡಿಯೂರು ಶ್ರೀ

ಬಂಟ್ವಾಳ :ಧರ್ಮ ಎಂದರೆ ಧಾರಣೆಗೆ ಯೋಗ್ಯವಾದದ್ದು, ನಮ್ಮ ದೇಹವೇ ದೇವಾಲಯ,ಧರ್ಮ ಯಾವ ಕಾಲಕ್ಕೂ ಶ್ರೇಷ್ಠ,ನಮ್ಮ ದೇಶವು ಧಾರ್ಮಿಕ ನಂಬಿಕೆಗಳ ತಳಹದಿಯಲ್ಲಿ ನಿಂತಿದೆ,ವಿಶ್ವದ ಧರ್ಮ ಚಾವಡಿ ಭಾರತ,ಆದ್ದರಿಂದ ನಮ್ಮ ಧರ್ಮಚಾರಣೆಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವ, ನಮ್ಮಲ್ಲಿರುವ ಸಂಪತ್ತನ್ನು ಸತ್ಪಾತ್ರರಿಗೆ ದಾನ ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗೋಣ ಎಂದು ಒಡಿಯೂರು ಕ್ಷೇತ್ರದ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ನೂತನವಾಗಿ ನಿರ್ಮಾಣಗೊಂಡ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಫೆ.16ರಂದು ಶುಕ್ರವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಾಚನ ನೀಡಿದರು.

ಶ್ರೀ ಕ್ಷೇತ್ರ ಹೊಸಮಾರು ಮಠದ ಪರಮಪೂಜ್ಯ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಾಚನ ನೀಡಿ,ದೇವಸ್ಥಾನಗಳು ಮನುಷ್ಯನಿಗೆ ಮನ ಶಾಂತಿ ನೀಡುತ್ರದೆ, ಕ್ಷೇತ್ರ ನಿರ್ಮಾಣ ಮಾಡಿದರೆ 7ಜನ್ಮಗಳ ಪಾಪ ಪರಿಹಾರವಾಗುತ್ತದೆ ಎಂದು ಹೇಳಿದರು

ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯಕುಮಾರ್ ಸೊರಕೆ ದೀಪ ಬೆಳಗಿಸಿ ಉದ್ಘಾಟಿಸಿದರು,ಸಭಾ ಅಧ್ಯಕ್ಷತೆಯನ್ನು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ವಹಿಸಿದ್ದರು. ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಚಂದ್ರಪ್ರಕಾಶ ಶೆಟ್ಟಿ ಪ್ರಸ್ತವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಉಮೇಶ್ ಎಂ ಶೆಟ್ಟಿ ಸಾಗು ಹೊಸಮನೆ, ಜಿ

ಪಂ ಮಾಜಿ ಸದಸ್ಯ ರವೀಂದ್ರ ಕಂಬಳಿ, ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು, ಬೋಳಾರ ಮುಖ್ಯಪ್ರಾಣ ದೇವಸ್ಥಾನದ ಅಧ್ಯಕ್ಷ ವಸಂತ ಶೆಟ್ಟಿ, ಮಾಜಿ ಜಿ ಪಂ ಸದಸ್ಯ ಪದ್ಮಶೇಖರ ಜೈನ್, ತಾ ಪಂ ಸದಸ್ಯ ಕುಚ್ಚಿಗುಡ್ಡೆ ಸಂಜೀವ ಪೂಜಾರಿ,ಇಳಿಯೂರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಟ್ರಸ್ಟಿ ಸಂಪತ್ ಕುಮಾರ್ ಶೆಟ್ಟಿ ಇಳಿಯೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಮಂಜುನಾಥ ಶೆಟ್ಟಿ, ದ ಕ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗಿರೀಶ್ ಆಳ್ವ,ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಉಪಸ್ಥಿತರಿದ್ದರು.

ಸಂತೋಷ್ ಕೋಟ್ಯಾನ್ ತುಂಬೆ ಸ್ವಾಗತಿಸಿ, ರಾಮಚಂದ್ರ ಸುವರ್ಣ ತುಂಬೆ ಧನ್ಯವಾದವಿತ್ತರು, ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

Leave a Comment