ಬಿ.ಸಿ.ರೋಡು: ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನ ಬ್ರಹ್ಮಕಲಶಕ್ಕೆ ಹೊರೆಕಾಣಿಕೆ ಸಮರ್ಪಣೆ.

Coastal Bulletin
ಬಿ.ಸಿ.ರೋಡು: ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನ ಬ್ರಹ್ಮಕಲಶಕ್ಕೆ ಹೊರೆಕಾಣಿಕೆ ಸಮರ್ಪಣೆ.

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಪೊಲೀಸ್ ಲೇನ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ಫೆ.16 ಶುಕ್ರವಾರ ಸಂಜೆ ನಡೆಯಿತು.

ಪೊಳಲಿ-ಕೈಕಂಬ ದ್ವಾರ ಬಳಿ ಪೊಳಲಿ ತಪೋವನ ವಿವೇಕ ಚೈತನ್ಯಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಉದ್ಯಮಿ ಬಿ.ರಘು ಸಪಲ್ಯ ಪಾಣೆಮಂಗಳೂರು ಇವರು ಮೆರವಣಿಗೆಗೆ ಚಾಲನೆ ನೀಡಿದರು.

ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಆಕರ್ಷಕ ಮೆರವಣಿಗೆಯಲ್ಲಿ ಅಕ್ಕಿ, ತೆಂಗಿನಕಾಯಿ, ತರಕಾರಿ, ಬಾಳೆ ಎಲೆ, ಅಡಿಕೆ, ಸೀಯಾಳ, ಸಹಿತ ವಿವಿಧ ಅಡುಗೆ ಸಾಮಾಗ್ರಿಗಳನ್ನು ಭಕ್ತರು ಸಮರ್ಪಿಸಿದರು. ಚೆಂಡೆ ಮತ್ತು ಬ್ಯಾಂಡು ವಾದ್ಯ ಸಹಿತ ಗೊಂಬೆ ಕುಣಿತ, ಬಣ್ಣದ ಕೊಡೆ, ಕಲಶಹೊತ್ತ ಸಮಸವ್ತ್ರಧಾರಿ ಮಹಿಳೆಯರು ಹಾಗೂ ನೃತ್ಯ ಭಜನೆ ತಂಡ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.


ಆಡಳಿತ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಅಧ್ಯಕ್ಷ ಭುವನೇಶ ಪಚ್ಚಿನಡ್ಕ, ಉಪಾಧ್ಯಕ್ಷ

ಆನಂದ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎನ್.ಪ್ರಕಾಶ ಕಾರಂತ್, ಡಿವೈಎಸ್ಪಿ ವಿಜಯಪ್ರಕಾಶ್, ಪ್ರಮುಖರಾದ ಜಗನ್ನಾಥ ಶೆಟ್ಟಿ, ಶಿವಕುಮಾರ್, ಅನಂತಪದ್ಮನಾಭ, ವಕೀಲ ಅಶ್ವನಿ ಕುಮಾರ್ ರೈ, ಚಂದ್ರಹಾಸ ಡಿ.ಶೆಟ್ಟಿ, ಲೋಕನಾಥ ಶೆಟ್ಟಿ, ವಿಶ್ವನಾಥ ಪೂಜಾರಿ, ಸದಾನಂದ ಡಿ.ಶೆಟ್ಟಿ, ಬಿ.ಸಂಜೀವ ಪೂಜಾರಿ, ರಾಮದಾಸ ಬಂಟ್ವಾಳ್, ಬಿ.ದೇವದಾಸ ಶೆಟ್ಟಿ, ಬೇಬಿ ಕುಂದರ್,ಬೊಂಡಲ ಚಿತ್ತರಂಜನ್ ಶೆಟ್ಟಿ, ಸತೀಶ್ ಕೆ, ಸದಾಶಿವ ಬಂಗೇರ, ಉಮೇಶ್ ಸಾಲ್ಯಾನ್ ಬೆಂಜನಪದವು,ದೇವಪ್ಪ್ಪ ಪೂಜಾರಿ, ರೊನಾಲ್ಡ್ ಡಿಸೋಜ, ಸದಾಶಿವ ಕೈಕಂಬ,ನಾಗೇಶ ಸಾಲ್ಯಾನ್, ಅಶೋಕ ಕುಮಾರ್, ದಿನೇಶ ಕುಮಾರ್, ಉಮೇಶ ಕುಮಾರ್ ವೈ, ನರೇಂದ್ರನಾಥ ಭಂಡಾರಿ, ಪ್ರಧಾನ ಅರ್ಚಕ ಈಶ್ವರ ಭಟ್ ಮಾದಕಟ್ಟೆ ಮತ್ತಿತರರು ಇದ್ದರು.

Leave a Comment