ಬಂಟ್ವಾಳ :ತಾಲೂಕಿನ ತುಂಬೆ ಗ್ರಾ ಪಂ ನಲ್ಲಿ ವಿಶೇಷ ಚೇತನರ ವಿಶೇಷ ಗ್ರಾಮ ಸಭೆಯು ಡಿ 17ರಂದು ಬುಧವಾರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಕೇಶವ, ಉಪಾಧ್ಯಕ್ಷರಾದ ಗಣೇಶ್ ಸಾಲಿಯಾನ್ ತುಂಬೆ, ನಿಕಟ ಪೂರ್ವ ಅಧ್ಯಕ್ಷ ಪ್ರವೀಣ್ ಬಿ ತುಂಬೆ, ಸದಸ್ಯರಾದ ಮಹಮ್ಮದ್ ಝಹೂರ್, ಅಬ್ದುಲ್ ಅಝೀಝ್, ಹೇಮಲತ ಜಿ ಪೂಜಾರಿ, ಇಬ್ರಾಹಿಂ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ
ಶಿವುಲಾಲ್ ಚವ್ಹಾಣ್, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಚಂದ್ರಕಲಾ ಜಿ, ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ವಿಶೇಷ ಚೇತನರು ಮತ್ತು ಪೋಷಕರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮ ಸಭೆಯಲ್ಲಿ ವಿಶೇಷ ಚೇತನರಿಗೆ ಚೆಕ್ ವಿತರಿಸಲಾಯಿತು, ಗ್ರಾಮೀಣ ಪುನರ್ ವಸತಿ ಕಾರ್ಯಕರ್ತ ಶಮೀರ್ ರವರು ಸ್ವಾಗತಿಸಿದರು ಹಾಗೂ ಚಂದ್ರಕಲಾ ಜಿ ವಂದಿಸಿದರು.














