ಪದ್ಮನಾಭ ಪೂಜಾರಿ ನೇರಂಬೋಳು ಇವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ

Coastal Bulletin
ಪದ್ಮನಾಭ ಪೂಜಾರಿ ನೇರಂಬೋಳು ಇವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ

ಬಂಟ್ವಾಳ :ದೇರಳಕಟ್ಟೆಯಲ್ಲಿ ಸಪ್ಟೆಂಬರ್ 14 ರಂದು ನಡೆದ ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ದ.ಕ. ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ಜಂಟಿಯಾಗಿ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶ್ರೀಯುತ ಪದ್ಮನಾಭ ಪೂಜಾರಿ ನೇರಂಬೋಳು ಬಂಟ್ವಾಳ ಇವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ನಾರಾಯಣ ರೈ ಕುಕ್ಕುವಳ್ಳಿ, ಕರ್ನಾಟಕ ಭಾವೈಕ್ಯ ಪರಿಷತ್‌ನ ಅಧ್ಯಕ್ಷ, ಸಾಹಿತಿ ಇಕ್ಬಾಲ್ ಬಾಳಿಲ,ಕಾರ್ಯದರ್ಶಿ ಸಾಹಿತಿ ಭೀಮರಾವ್ ವಾಷ್ಟರ್, ಯು‌.ಟಿ. ಇಫ್ತಿಕಾರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರು ಚಿತ್ರ ಕಲಾವಿದ ಮತ್ತು ಶಿಕ್ಷಕರಾಗಿದ್ದು, ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಸ್ವರಚನೆಯ ಕೆಲವು ಭಕ್ತಿಗೀತೆಗಳನ್ನು ಹಾಡಿರುವ ಇವರು ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿರುತ್ತದೆ. ಇವರು ಶ್ರೀ ರಕ್ತೇಶ್ವರಿ ಯುವಕ ಸಂಘ (ರಿ.) ನೇರಂಬೋಳು ಇದರ ಸ್ಥಾಪಕ ಸದಸ್ಯರೂ

ಆಗಿರುತ್ತಾರೆ. 

ಕನ್ನಡ ತುಳು ಸಾಹಿತ್ಯ ವೇದಿಕೆ ಉಡುಪಿ ಮತ್ತು ತುಳುವೆರೆ ಕಲ ಎಂಬೆರಡು ಸಾಹಿತ್ಯ ಬಳಗದಲ್ಲಿ ಸಕ್ರಿಯವಾಗಿ ಬರಹದಲ್ಲಿ ತೊಡಗಿಕೊಂಡಿರುವ ಇವರ ತುಳು ಸಣ್ಣ ಬರಹಗಳ ಸಂಗ್ರಹವು ಇತ್ತೀಚೆಗೆ ಎಸಲ ಪನಿ ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ತುಳುವೆರೆ ಕಲದ ಸಹಯೋಗದೊಂದಿಗೆ ಕೊಂಡೆವೂರು ಮಠದಲ್ಲಿ ಬಿಡುಗಡೆಗೊಂಡಿದೆ

Leave a Comment