Coastal Bulletin

ಮಂಗಳೂರು : ಕರ್ನಾಟಕ ರಾಜ್ಯ ಕುಲಾಲ-ಕುಂಬಾರರ ಯುವವೇದಿಕೆ ವತಿಯಿಂದ ರಾಜ್ಯ, ವಿಭಾಗ, ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಕಾರ್ಯಕ್ರಮವು ಸುರತ್ಕಲ್ ಕುಲಾಲ ಭವನದಲ್ಲಿ ಸೆ 18ರಂದು ಆದಿತ್ಯವಾರ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸರ್.ಎಂ ವಿಶ್ವೇಶ್ವರಯ್ಯ ಪ್ರಶಸ್ತಿ ಪುರಸ್ಕೃತರು ಶ್ರೀ ಶ್ರೀನಿವಾಸ್ ಆರ್ ಕಾರ್ಯಕ್ರಮದ ಸಭಾಧ್ಯಕ್ಷರಾಗಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಮಾಜಿ ಆಡಳಿತ ಮೊಕ್ತೇಸರರು ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರ ಶ್ರೀ ಸುರೇಶ್ ಕುಲಾಲ್ ಹಾಗೂ ಕುಂಬಾರರ ಗುಡಿಕೈಗಾರಿಕಾ

ಸಹಕಾರಿ ಸಂಘ ಪೆರ್ಡೂರು ಅಧ್ಯಕ್ಷ ಶ್ರೀ ಸಂತೋಷ್ ಕುಲಾಲ್ ಪಕ್ಕಾಲು ಭಾಗವಹಿಸಲಿದ್ದಾರೆ.

ಪ್ರತಿಷ್ಠಿತ ಶ್ರೀ ದೇವರಾಜ ಅರಸು ರಾಜ್ಯ ಪ್ರಶಸ್ತಿ ಪುರಸ್ಕೃತರು ಡಾ.ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment