ಬಂಟ್ವಾಳ :ಜೇಸಿಐ ಬಂಟ್ವಾಳ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಬಂಟ್ವಾಳ ತಾಲೂಕಿನ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿ ಸಪ್ತಾಹ,"ಸ್ಫೂರ್ತಿ" ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆ.16 ರಿಂದ 24ವರೆಗೆ ನಡೆಯಲಿದೆ.
7 ಶಾಲಾ ಕಾಲೇಜುಗಳಲ್ಲಿ ನಡೆಯುವ 7ದಿನಗಳ ಈ ಕಾರ್ಯಕ್ರಮದಲ್ಲಿ 16 ಜನ ವಲಯ ತರಬೇತು ನೀಡಲಿದ್ದು,ಕರ್ನಾಟಕ ಪ್ರೌಡಶಾಲೆ ಮಾಣಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಲಯ 15 ರ ಪೂರ್ವ ಅಧ್ಯಕ್ಷ ಜೇಸಿ HGF ಕಿರಣ್ ಹೆಗ್ಡೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಪ್ರಥಮ ದಿನದ ತರಬೇತುದಾರರಾಗಿ ಜೇಸಿಐ ಸೆನೆಟರ್ ಪ್ರದೀಪ್ ಬಾಕಿಲ, ಜೇಸಿ HGF ಅಜಿತ್ ರೈ,ಜೇಸಿಐ ಸೆನೆಟರ್ ಸ್ವಾತಿ ರೈ
ತರಬೇತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜೇಸಿಐ ಬಂಟ್ವಾಳದ ಅಧ್ಯಕ್ಷ ಜೇಸಿ HGF ರೋಶನ್ ರೈ ಗಣ್ಯರನ್ನು ಸ್ವಾಗತಿಸಿ,ವಿದ್ಯಾರ್ಥಿಗಳು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶಾಲೆಯ ಮುಖ್ಯ ಉಪಧ್ಯಾಯ ಬಿ ಕೆ ಭಂಡಾರಿ, ವಲಯ ಅಧಿಕಾರಿಗಳಾದ JFM ರಶ್ಮಿ ಶೆಟ್ಟಿ,ಮತ್ತು ಜೇಸಿ ಸಂತೋಷ್ ಜೈನ್, ಜೇಸಿ ಚಿತ್ತರಂಜನ್ ಶೆಟ್ಟಿ .ಗಣ್ಯರಾದ ಶ್ರೀ ಇಬ್ರಾಹಿಂ ಮತ್ತಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.















