ಮೂಲೆ ಸೇರಬೇಕಾಗಿದ್ದ ಹಳೆಯ ಪಿಠೋಪಕರಣಕ್ಕೆ ಹೊಸ ರಂಗು.ಪೇಪರ್ ಸ್ಟಾಂಡ್ , ಪುಸ್ತಕ ಶೆಲ್ಫ್, ಕಿಚನ್ ಶೆಲ್ಫ್ ಗಳಾಗಿ ಮಾರ್ಪಡು. ತಾನು ಕಲಿತ ಸರ್ಕಾರಿ ಶಾಲೆಗೆ ಮಹತ್ವದ ಕೊಡುಗೆ ಸಲ್ಲಿಸಿದ ರಮೇಶ್ ಆಚಾರ್ಯ.
ರಮೇಶ ಆಚಾರ್ಯ (52) ಅವರು ಬಂಟ್ವಾಳ ತಾಲೂಕಿನ ಮೂಡಂಬೈಲಿನ 90ವರ್ಷದ ಇತಿಹಾಸವಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ರ ದಶಕದಲ್ಲಿ ಒಂದನೇ ಕ್ಲಾಸಿನಿಂದ ಏಳನೇ ತರಗತಿವರೆಗೆ ವ್ಯಾಸಂಗ ಮಾಡಿದ ಹಿನ್ನೆಲೆಯಲ್ಲಿ ಆ ಶಾಲೆಯ ಹಿರಿಯ
ವಿದ್ಯಾರ್ಥಿ. ನುರಿತ ಮರ ಕೆಲಸಗಾರರಾಗಿರುವ ರಮೇಶ್ ಆಚಾರ್ಯರು ಒಂದು ತಿಂಗಳ ಕಾಲ ಶಾಲೆಯಲ್ಲಿ ಕೆಲಸ ಮಾಡಿ ಉಚಿತವಾಗಿ,ಸುಂದರವಾದ ಪೀಠೋಪಕರಣಗಳನ್ನು ಮರುಬಳಕೆ ಮಾಡಿಕೊಟ್ಟಿದ್ದಾರೆ. ಅವುಗಳಲ್ಲೂ ಆಕರ್ಷಕ ವಿನ್ಯಾಸದ ಪುಸ್ತಕದ ಶೆಲ್ಫ್ ಎಲ್ಲರ ಗಮನ ಸೆಳೆಯುತ್ತಿದೆ.














